ಬೆಳಗಾವಿ: ಅಥಣಿ ಪಟ್ಟಣ ಹಾಗೂ ಅಥಣಿ ತಾಲೂಕಿನನಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಶೈಕ್ಷಣಿಕ ಕ್ರಾಂತಿಯ ಜೊತೆಗೆ ಜನಪರ ನೂರಾರು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಯುವ ಧುರಿನರು ಹಾಗೂ ಸಮಾಜ ಸೇವಕರಾದ ಸನ್ಮಾನ್ಯ ಶ್ರೀ ಚಿದಾನಂದ ಸವದಿ ಅವರು ಹೇಳಿದರು.
ಅಥಣಿ ನಗರದಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದರು. ಅಥಣಿ ಪಟ್ಟಣವನ್ನು ಹಸಿರುಗೊಳಿಸುವ ಸಂಬಂಧ ಪುರಸಭೆ ನೇತೃತ್ವದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದ್ದೇವೆ ಹಾಗೂ ಇನ್ನು ಕೂಡಾ ನೆಡುತ್ತಿದ್ದೇವೆ ಎಂದು ಹೇಳಿದರು.
ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಯೋಜನೆ ಅನೇಕ ವರ್ಷಗಳ ಹಿಂದೆಯೇ ಅನುಷ್ಠಾನಗೊಂಡಿದೆ. ಯೋಜನೆಯಿಂದ ಹೊರಗುಳಿದ ಕಕಮರಿ, ಕೊಟ್ಟಲಗಿ, ಹಾಲಳ್ಳಿ, ಬನ್ನೂರ ಇನ್ನೂ ಅನೇಕ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಕೊಟ್ಟಲಗಿ ಅಮ್ಮರಾಜೇಶ್ವರಿ ಏತ ನೀರಾವರಿ ಯೋಜನೆ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಜನವರಿಗೆ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದು ಹೇಳಿದರು .
ಇದೆ ವೇಳೆಯಲ್ಲಿ ಅಥಣಿಯ ಪುರಸಭೆ ಸದಸ್ಯರಾದ ಹಾಗೂ ಕಾಂಗ್ರೆಸ್ಸಿನ ಮುಖಂಡರಾದ ಕಲ್ಲೇಶ್ ಮಡ್ಡಿ, ಮುಖಂಡರುಗಳಾದ ಶ್ರೀಶೈಲ ಹಳ್ಳದಮಳ ,ರಾಜು ದಿವಾನಮಳ, ಮಲ್ಲೇಶ್ ಉದ್ದಾರ, ಮಲ್ಲಿಕಾರ್ಜುನ್ ಬುಟಾಳಿ, ಸಂತೋಷ ಸಾವಡಕರ್, ಬೀರಪ್ಪ ಯಂಕಚ್ಚಿ, ಇನ್ನೂ ಅನೇಕ ಯುವದೂರಿಣರು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ



















