
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಸಂಗಮನಾಥ ಅರ್ಬನ್ ಸೌಹಾರ್ದ ಸಹಕಾರಿ ಸಂಘ,ನಿ. ಅಥಣಿ ಇದರ ಶಾಖೆಯನ್ನು ದೀಪ ಪ್ರಜ್ಜಲಿಸುವ ಮೂಲಕ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಉದ್ಘಾಟಿಸಿದರು.
ಇದೆ ಸಮಾರಂಭದಲ್ಲಿ ಅಥಣಿಯ ಶೆಟ್ಟರ ಮಠದ ಶ್ರೀ ಮ.ನಿ.ಪ್ರ.ಮರುಳಸಿದ್ಧ ಮಹಾಸ್ವಾಮೀಜಿಗಳು , ಕೌಲಗುಡ್ಡ, ಹನುಮಾಪುರ ಮಠದ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಮತ್ತು ಶ್ರೀ ಪರಪ್ಪ ಸವದಿ ಅಧ್ಯಕ್ಷರು ಕೆ.ಎಸ್.ಎಸ್.ಕೆ, ಶ್ರೀ ಶಂಕರ ವಾಘಮೋಡೆ ಉಪಾಧ್ಯಕ್ಷರು ಕೆ.ಎಸ್.ಎಸ್.ಕೆ,ಶ್ರೀಮತಿ ಅನ್ನಪೂರ್ಣ ಶೇಮಡೆ, ಗ್ರಾ.ಪಂ. ಅಧ್ಯಕ್ಷರು ಕೆಂಪವಾಡ, ಶ್ರೀ ಮಲ್ಲುಗೌಡ ಪಾಟೀಲ ಹಾಗೂ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಲ್ಲೇಶ ಸವದಿ ಮತ್ತು ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ. ವಿಠ್ಠಲ ಖೋಕಾಟೆ




















