ಬಳ್ಳಾರಿ / ಕಂಪ್ಲಿ : ಮೆಟ್ರಿ, ಶಿವಪುರ, ಚಿನ್ನಾಪುರ, ಉಪ್ಪಾರಹಳ್ಳಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗ್ರಾ.ಪಂ ಉಪಾಧ್ಯಕ್ಷ ನೆಣಕಿ ಗಿರೀಶ್ ಇವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳ ಬಳಗದಿಂದ ಉಚಿತವಾಗಿ ಊಟದ ತಟ್ಟೆಗಳನ್ನು ಶುಕ್ರವಾರ ವಿತರಿಸಲಾಯಿತು.
ತಾಲೂಕಿನ ಮೆಟ್ರಿ ಗ್ರಾಮದಲ್ಲಿರುವ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ 540 ವಿದ್ಯಾರ್ಥಿಗಳಿಗೆ, ಶಿವಪುರ ಶಾಲೆ 180, ಚಿನ್ನಾಪುರ 50, ಉಪ್ಪಾರಹಳ್ಳಿ 280 ಸೇರಿದಂತೆ 1050ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ಲೇಟ್‌ಗಳನ್ನು ವಿತರಿಸಿದರು.
ಗ್ರಾಪಂ ಸದಸ್ಯ ಹೆಚ್.ಕುಮಾರ ಮಾತನಾಡಿ, ಹಲವು ವರ್ಷಗಳಿಂದ ಸಮಾಜಮುಖಿಯಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಗಿರೀಶ್ ಈಗ ಇಲ್ಲಿನ ನಾಲ್ಕು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪ್ಲೇಟ್‌ಗಳನ್ನು ನೀಡುವ ಮೂಲಕ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ, ಇವರ ಕೊಡುಗೆ ಅನನ್ಯವಾಗಿದೆ. ಇವರು ಇದೇ ರೀತಿ ಸಮಾಜ ಸೇವೆಗಳನ್ನು ಸಲ್ಲಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಮತ್ತು ಆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದರು. ನಂತರ ಗಿರೀಶ್ ಇವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಮಲ್ಲಿಕಾರ್ಜುನ, ಕುಶಾಲಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಹುಲುಗಪ್ಪ, ಸದಸ್ಯ ಹೆಚ್. ಜಗದೀಶ, ಮುಖ್ಯಗುರುಗಳಾದ ನಿರ್ಮಲಾ, ಮೂರ್ತಿ, ಮುಖಂಡರಾದ ಅಗಸರ ನಾಗೇಂದ್ರ, ಕನಕಪ್ಪ, ನಾಗರಾಜ, ಗಣೇಶ, ಕೊಂಡಪ್ಪ, ಶಾಂತಕುಮಾರ, ಪರಶುರಾಮ, ಮಾಯಪ್ಪ, ಪಂಪಾ ಸೇರಿದಂತೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















