ಯಾದಗಿರಿ/ಗುರುಮಠಕಲ್: ತಾಲೂಕಿನ ಗ್ರಾಮೀಣ ಗ್ರಾಮವಾದ ಕೊಂಕಲ್ ಯುವಕ ಆನಂದ್ ತಂದೆ ರಾಮಚಂದ್ರ ಬೆಂಗಳೂರಿನ ಎಮ್ ವಿ ಜೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು ಗ್ರಾಮದ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಕೇವಲ ಉಳ್ಳವರಿಗೆ ಮಾತ್ರ ಎನ್ನುವ ಈ ಕಾಲದಲ್ಲಿ ಅದರಲ್ಲೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆಯುವ ಮೂಲಕ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾಗಿರುವ ಆನಂದ್ ಗೆ ಅಭಿನಂದನೆಗಳ ಸುರಿಮಳೆ ಗೈದ ಗ್ರಾಮಸ್ಥರು.
ವಿದ್ಯೆ ಸಾಧಕನ ಸೊತ್ತೆ ವಿನಃ ಸೋಮಾರಿಯ ಸೊತ್ತಲ್ಲ ಎಂಬುದಕ್ಕೆ ಪ್ರಥಮ ಪೀಳಿಗೆಯ ಶಿಕ್ಷಣ ಪಡೆಯುತ್ತಿರುವ ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿದ್ದರೂ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತಮ ವೈದಕೀಯ ಶಿಕ್ಷಣ ಪಡೆದು ಬಡ ರೋಗಿಗಳಿಗೆ ಉತ್ತಮ ಸೇವೆ ನೀಡಲಿ ಎಂದು ಹಾರೈಸುವೆ.
- ರಂಗ ಸ್ವಾಮಿ ಗ್ರಾಮದ ಯುವ ಮುಖಂಡರು.
ವರದಿ ಜಗದೀಶ ಕುಮಾರ ಭೂಮಾ




















