ಬಳ್ಳಾರಿ / ಕಂಪ್ಲಿ: ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ(ಪ್ರೌಢಶಾಲಾ ವಿಭಾಗ) ಕಾಲೇಜು ಆವರಣದಲ್ಲಿ 2023-24ನೇ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 35.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಜಿ+1 ಕೊಠಡಿ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಶಾಸಕ ಗಣೇಶ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮೊದಲಿಂದಲೂ ಹೆಚ್ಚಿನ ಆಧ್ಯತೆ ನೀಡುತ್ತಾ ಬರಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಸುಸಜ್ಜಿತ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇಲ್ಲಿನ ಹೆಚ್ಚುವರಿಯಾಗಿ ಜಿ+ ಕೊಠಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಮತ್ತು ಹಳೆಯ ಶಾಲಾ ಕಟ್ಟಡಗಳ ಮೇಲ್ಛಾವಣಿಯ ದುರಸ್ಥಿಗೆ ಅತೀ ಶೀಘ್ರದಲ್ಲಿ ಅನುದಾನ ನೀಡಲಾಗುವುದು ಕಂಪ್ಲಿಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಅತಿ ಅವಶ್ಯಕತೆ ಇದೆ. ಈಗಾಗಲೇ ಕುರುಗೋಡಿನಲ್ಲಿ ಬಿಇಒ ಕಛೇರಿ ಇದ್ದು, ಹೊಸ ಬಿಇಒ ಕಛೇರಿಯನ್ನು ಕಂಪ್ಲಿಗೆ ತರುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಖುದ್ದಾಗಿ ಚರ್ಚಿಸಿ, ಕಂಪ್ಲಿಯಲ್ಲಿ ಇಬಿಒ ಕಛೇರಿ ಆಗುವತನಕ ಬಿಡುವುದಿಲ್ಲ. ಈಗಾಗಲೇ ಬಹು ಬೇಡಿಕೆಯಾಗಿರುವ ಕಂಪ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಖುದ್ದಾಗಿ ಲೋಕೋಪಯೋಗಿ ಇಲಾಖೆಯ ಸಚಿವಾರದ ಸತೀಶ ಜಾರಕಿಹೋಳಿಯವರು ಭೇಟಿ ನೀಡಿ ಪರಿಶೀಲಿಸಿ, ಹೊಸ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಬರುವ ಅಧಿವೇಶನದಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಜೋಳ ಖರೀದಿಗೆ ಸಂಬಂಧಿಸಿದಂತೆ ಇಲ್ಲಿನ ರೈತರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯರಾದ ಸಿ.ಆರ್.ಹನುಮಂತ, ಲಡ್ಡು ಹೊನ್ನೂರವಲಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಕರೇಕಲ್ ಮನೋಹರ, ಬಿ.ಸಿದ್ದಪ್ಪ, ವಿ.ಸತ್ಯಪ್ಪ, ಡಕೋರೇಷನ್ ನಾಗರಾಜ, ಅಕ್ಕಿ ಜಿಲಾನ್, ರಿಯಾಜ್ ಅಹಮ್ಮದ್, ಸುಧಾಕರ, ವಾಸು, ಪ್ರಭಾರಿ ಪ್ರಾಂಶುಪಾಲ ಜಿಲಾನ್, ಉಪ ಪ್ರಾಚಾರ್ಯೆ ಸುಜಾತ, ಇಸಿಒ ಟಿಂಎ ಬಸವರಾಜ, ಸಹ ಶಿಕ್ಷಕರಾದ ಸುನೀಲ್, ಹೆಚ್.ಎಂ. ಶಕುಂತಲಾ, ಅತಿಥಿ ಶಿಕ್ಷಕಿಯರಾದ ಎಂ.ಮೇಘಾ, ಕಾಳಿ ಭಾರ್ಗವಿ, ಸರೋಜಮ್ಮ, ಗೌತಮಿ, ಶ್ವೇತಾ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















