ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಾತ್ಸಲ್ಯ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆನಿಗೊಳ ವಲಯದ ವಕ್ಕುಂದ ಕಾರ್ಯಕ್ಷೇತ್ರದಲ್ಲಿ ನಿನ್ನೆ ಮಾಶಾಸನ ಫಲಾನುಭವಿಯಾದ ಶ್ರೀಮತಿ ಕಾಶವ್ವ ಬಸಪ್ಪ ನಾಗನೂರು ಇವರಿಗೆ ಧರ್ಮಸ್ಥಳ ಕ್ಷೇತ್ರದಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿಯಾದ ನಿರ್ಗತಿಕರಿಗೆ “ವಾತ್ಸಲ್ಯ ಮನೆ ನಿರ್ಮಾಣ” ಮಾಡುವುದುರ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಕಲ್ಲಿ, ಉದ್ಘಾಟಕರಾಗಿ ಖ್ಯಾತ ಚಲನಚಿತ್ರ ನಟರು ಮತ್ತು ನಿರ್ದೇಶಕರು ಶ್ರೀಯುತ ಸಿ ಕೆ ಮೆಕ್ಕೆದ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಅನಿಗೋಳ,ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್, ತಾಲೂಕಿನ ಯೋಜನಾಧಿಕಾರಿಗಳಾದ ವಿಜಯ್ ಕುಮಾರ್ ಎಂ,ಅರ್ಚಕರಾದ ಚೆನ್ನಯ್ಯ ಚಿಕ್ಕಮಠ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜೆ. ವಲಯದ ಮೇಲ್ವಿಚಾರಕರಾದ ಜಗದೀಶ ಕುಂಬಾರ,ಒಕ್ಕೂಟದ ಅಧ್ಯಕ್ಷರಾದ ಮಲ್ಲವ್ವ ಮತ್ತು ಅನ್ನಪೂರ್ಣ ಇವರ ಸಮ್ಮುಖದಲ್ಲಿ ದೀಪಾ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ನಾಯ್ಕ್ ಅವರು ಜ್ಞಾನವಿಕಾಸ ಕಾರ್ಯಕ್ರಮ ರೂಪುರೇಷೆ, ಕಾರ್ಯಕ್ರಮದಡಿಯಲ್ಲಿ ಸಿಗುವಂತ ಸೌಲಭ್ಯಗಳ ಬಗ್ಗೆ ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 844 ನಿರ್ಗತಿಕರಿಗೆ ಪ್ರತಿ ತಿಂಗಳು ರೂ.1000 ದಿಂದ 1500/- ರೂ.ವರೆಗೆ ಮಾಶಾಸನ ನೀಡುತ್ತಿದ್ದು, ಪ್ರಸ್ತುತ ವರ್ಷ ತೀರ ನಿರ್ಗತಿಕರ ಫಲಾನುಭಗಳನ್ನು ಗುರುತಿಸಿ ಮಕ್ಕಳು ಇಲ್ಲದವರು, ದುಡಿಯಲು ಶಕ್ತಿ ಇಲ್ಲದವರು, ಅವರಿಗೆ ಯಾವುದೇ ರೀತಿಯ ಸಹಾಯ ಸಿಗದೆ ಅವರ ಜೀವನಕ್ಕೆ ಆಧಾರನೇ ಇಲ್ಲದಂತಹ ಸದಸ್ಯರನ್ನು ಗುರುತಿಸಿ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 44 ವಾತ್ಸಲ್ಯ ಮನೆ ರಚನೆ ಹಾಗೂ ಮನೆ ರಿಪೇರಿ ಶೌಚಾಲಯ ರಚನೆ ಮಾಡುವ ಮೂಲಕ ಅವರಿಗೆ ಸುಖ ಜೀವನ ನಡೆಸಲು ಸೂರು ಕಟ್ಟಿ ಕೊಡುವ ಮೂಲಕ ಬದುಕಲು ಹುಮ್ಮಸ್ಸು ತುಂಬುವಂತ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಮತ್ತು ಇದಲ್ಲದೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಹಲವಾರು ದೇವಸ್ಥಾನಗಳಿಗೆ ಶಾಲಾ ಕಟ್ಟಡಗಳಿಗೆ ಅನುದಾನಗಳ ನೀಡುವುದು ಉನ್ನತ ಪದವೀಧರ ಶಿಕ್ಷಣ ಮಾಡುವಂತಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಕಾರ್ಯಕ್ರಮ ಅಡಿಯಲ್ಲಿ ಶಿಕ್ಷಕರ ಒದಗಣೆ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ ನೀಡುವ ಮೂಲಕ ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಲು ಅವಕಾಶ ನೀಡಿರುತ್ತಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಕರಾದ ಸಿ ಕೆ ಮೆಕ್ಕೆದ್ ಅವರು ಸಂಘಟನೆ ಮಾಡುವ ಮೂಲಕ ಧರ್ಮಸ್ಥಳ ಸಂಸ್ಥೆ ಅಪಾರವಾದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ನೇತೃತ್ವದಲ್ಲಿ ಹಿಂದುಳಿದ ಬಡ ಹೆಣ್ಣು ಮಕ್ಕಳು ತಂದೆ ತಾಯಿ ನೋಡದ, ಮಕ್ಕಳಿರದ ವಯಸ್ಸಾದ ವೃದ್ಧರಿಗೆ ನೀಡುವ ಸೌಲಭ್ಯಗಳನ್ನು ಕರ್ನಾಟಕದ್ಯಾದಂತ ನೀಡುತ್ತಿರುವುದು ಹೆಮ್ಮೆಯ ವಿಷಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದೇ ತೆರನಾಗಿ ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಧಿಕಾರಿ ಶೈಲಾ ಜೆ,ಸ್ವಾಗತವನ್ನು ವಲಯದ ಮೇಲ್ವಿಚಾರಕರಾದ ಜಗದೀಶ ಕುಂಬಾರ ರವರು ನೆರವೇರಿಸಿದರು ಈ ಸಂದರ್ಭ ಸೇವಾ ಪ್ರತಿನಿಧಿ ಭಾರತಿ ಢವಳೆ ರೇಣುಕಾ ಜಾವೂರೆ ಸಂಘದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ ಉಮೇಶ್ ಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!