ಕೊಪ್ಪಳ/ ಕುಕನೂರು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ನಿಮಿತ್ಯ ಶಾಂತಿ ಸಭೆ ನೆರವೇರಿಸಲಾಯಿತು.
ಯಲಬುರ್ಗಾ ವೃತ್ತ ಪೊಲೀಸ್ ಠಾಣೆ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಮಾತನಾಡಿ ಪ್ರತಿ ಒಬ್ಬರು ಗೌರಿ ಗಣೇಶ ಪ್ರತಿಷ್ಠಾಪನೆ ನೆರವೇರಿಸುವರು ಪೊಲೀಸ್ ಠಾಣೆಯಿಂದ ಮತ್ತು ವಿದ್ಯುತ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅನುಮತಿ ಪಡೆದುಕೊಳ್ಳಬೇಕು, ಗೌರಿ ಗಣೇಶ ಹಬ್ಬದ ನೆಪದಲ್ಲಿ ಇಸ್ಪೀಟು, ಜೂಜು, ಮಸ್ತಿಗಳಿಗೆ, ಅವಕಾಶ ಇರುವುದಿಲ್ಲ, ಗೌರಿ ಗಣೇಶ ಸ್ಥಾಪನೆಯೂ ಮತ್ತು ಎಷ್ಟು ದಿನಗಳಿಗೆ ವಿಸರ್ಜನೆ ನೆರವೇರಿಸುವರೆಂದು ಪೊಲೀಸ್ ಠಾಣಾ ಇಲಾಖೆಗೆ ತಿಳಿಸಬೇಕು. ಪೊಲೀಸ್ ಠಾಣಾ ಇಲಾಖೆಯ ಗಮನಕ್ಕೆ ಬರದಂತೆ ಗಣೇಶನ ಪ್ರತಿಷ್ಠಾಪನೆ ಮಾಡಿದಲ್ಲಿ ಅಲ್ಲಿ ನಡೆಯುವಂತಹ ಅಹಿತಕರ ಘಟನೆಗೆ ಅವರೇ ಜವಾಬ್ದಾರರು.
ಗಣೇಶನ ವಿಸರ್ಜನಾ ಸಂದರ್ಭದಲ್ಲಿ ಡಿಜೆಗೆ ಅನುಮತಿ ಇರುವುದಿಲ್ಲ, ಗಣೇಶ ವಿಸರ್ಜನಾ ಸಂದರ್ಭದಲ್ಲಿ ಮಧ್ಯ ಸೇವಿಸಿ ಯಾವುದೇ ರೀತಿಯಿಂದ ಗಲಭೆಗಳು ಕೆಟ್ಟದಾಗಿ ವರ್ತಿಸಿದಾಗ ಅಂತವರ ವಿರುದ್ಧ ಯಾವುದೇ ಮುಲಾಜಿ ಇಲ್ಲದೆ ಅಂಥವರ ವಿರುದ್ಧ ರೌಡಿ ಶೀಟ್ ನೆರವೇರಿಸಲಾಗುತ್ತದೆ.
ಪೊಲೀಸ್ ಇಲಾಖೆಯವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ವಿರುದ್ಧ ವರ್ತಿಸಿದರೆ ಅಂತವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಆದ್ದರಿಂದ ಎಲ್ಲರೂ ಅತ್ಯಂತ ಎಚ್ಚರಿಕೆಯಿಂದ ಹಬ್ಬ ಆಚರಣೆ ನೆರವೇರಿಸಬೇಕು ಎಂದು ಹೇಳಿದರು.
ಟಿ. ಗುರುರಾಜ ಪಿಎಸ್ಐ ಮಾತನಾಡಿ ಗಣೇಶ ಹಬ್ಬದ ಮೆರವಣಿಗೆ ವೇಳೆ ಮದ್ಯಪಾನ ಮಾಡಿ ಅಸಭ್ಯ ನೃತ್ಯ ಮಾಡುವುದು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವುದು, ಪೊಲೀಸರೊಂದಿಗೆ ಅನಾವಶ್ಯಕ ಜಗಳ ಮಾಡಿ, ಉದ್ವಿಗ್ನ ವಾತಾವರಣ ಸೃಷ್ಟಿಸುವುದನ್ನು ಮಾಡಬಾರದು ಈ ನಿಟ್ಟಿನಲ್ಲಿ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಸ್ವಯಂ ಸೇವಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದರು.
ರಶೀದ್ ಹಣಜಗೇರಿ ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ ಕುಕುನೂರು ಪಟ್ಟಣದಲ್ಲಿ ಜಾತಿ, ಮತ ,ಪಂಥ ಎನ್ನದೆ ಎಲ್ಲರೂ ಒಡಗೂಡಿ ಪ್ರತಿಯೊಂದು ಹಬ್ಬ ಆಚರಣೆ ಮಾಡುತ್ತಿದ್ದು ಎಲ್ಲರಲ್ಲಿಯೂ ಸಹಕಾರ ಮನೋಭಾವನೆ ಇದೆ, ಯಾವುದೇ ತರದಿಂದ ಮದ್ಯ ಸೇವಿಸಿ ಡಿಜೆ ಸೇರಿದಂತೆ ಅಧಿಕ ಸೌಂಡ್ ಸಿಸ್ಟಮ್ ಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ವರ್ತಿಸದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಗಣೇಶ ವಿಸರ್ಜನೆ ನೆರವೇರಿಸಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದಲ್ಲಿ ಅಂತವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಿಂಗಂ ಎಂದೇ ಪ್ರಸಿದ್ಧಿಯಾದ ಕುಕುನೂರು ಠಾಣೆಯ ಪಿಎಸ್ಐ ಟಿ. ಗುರುರಾಜ್ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದ್ದರಿಂದ ಪೊಲೀಸ್ ಇಲಾಖೆಯೊಂದಿಗೆ ಸರಿಯಾಗಿ ವರ್ತಿಸಿ ಶಿಸ್ತು ಶಾಂತಿಯಿಂದ ಹಬ್ಬ ಆಚರಣೆ ನೆರವೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಪ್ಪ ಪಿ ಎಸ್ ವೈ ತನಿಖೆ ಅಧಿಕಾರಿ, ಜ್ಞಾನೇಶ್ವರ್ ತುಂಗಳ ಪಿಎಫ್ ಐ, ಅಗ್ನಿಶಾಮಕ ಠಾಣೆ ಸಿಬ್ಬಂದಿಯವರು, ಹನುಮಂತ ಮುತ್ತಾಳ, ಕರಿಬಸಯ್ಯ ಬಿನ್ನಾಳ, ರಶೀದ್ ಹಣಜಗೇರಿ, ಲಕ್ಷ್ಮಣ ಕಾಳೆ, ವಿನಯ ಸರಗಣಚಾರ, ರಾಜು ದ್ಯಾಂಪೂರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮಾಜದ ಪಟ್ಟಣದ ಗುರು ಹಿರಿಯರು ಯುವಕರು ಇತರರು ಇದ್ದರು.
- ಕರುನಾಡ ಕಂದ



















