ಗುಲಾಮಗಿರಿಗೆ ನೊಂದಿದ್ದ ಆ ದಿನ
ಸಿಡಿದೆದ್ದು ನಿಂತಿತ್ತು ಎಲ್ಲರೊಳ ಮನ
ರೋಷಾವೇಷದಿ ಹೋರಾಡಿದ ಜನ
ಕೊನೆಗೂ ದಕ್ಕಿತು ಸ್ವಾತಂತ್ರ್ಯ ಸುದಿನ.
ಅನೇಕ ದೇಶ ಭಕ್ತರ ಹೋರಾಟ
ಪಿಂಗಳಿ ವೆಂಕಯ್ಯನ ಬಾವುಟ
ಶುರುವಾಯ್ತು ಎಲ್ಲೆಡೆ ಹಾರಾಟ
ಭರತವಾಯ್ತು ವಿಹಂಗಮ ನೋಟ.
ಹರಿಸಿ ಹಲವಾರು ಮಹಾತ್ಮರು ನೆತ್ತರು
ತಂದರು ಸ್ವಾತಂತ್ರ್ಯದ ಉಸಿರು
ತ್ರಿವರ್ಣ ಧ್ವಜದ ಬಣ್ಣ ಮೂರು
ಅವುಗಳೇ ಕೇಸರಿ ಬಿಳಿ ಹಸಿರು.
ತ್ರಿವರ್ಣ ಧ್ವಜ ಸಾಮರಸ್ಯದ ಸಂಕೇತ
ನಡುವೆ ಅಶೋಕ ಚಕ್ರವು ಆಕರ್ಷಕ
ಬಣ್ಣಗಳೆಲ್ಲ ಶಾಂತಿ ಮಂತ್ರ ದ್ಯೋತಕ
ಭಾರತಾಂಬೆ ಮಡಿಲು ಜನ್ಮ ಸಾರ್ಥಕ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.



















