ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಂಸ್ಕೃತಿಕ ನಗರಿಯಲ್ಲಿ ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬ: ಡಬಲ್ ಆಯ್ತು ಜನರ ಖರೀದಿ ಉತ್ಸಾಹ

ಗುಜರಾತ್, ಪಂಜಾಬ್, ಹೈದರಾಬಾದ್, ಚೆನೈ ಮತ್ತು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕರಕುಶಲ ವಸ್ತುಗಳ ಮಳಿಗೆಗಳು ಸ್ಥಾಪನೆಗೊಂಡಿದ್ದವು. ಗುಜರಾತ್‌ನಿಂದ ಕುರ್ತಿ, ಬಟ್ಟೆ, ಬ್ಯಾಗ್‌ಗಳು, ಮಹಿಳೆಯರಿಗೆ ಬಳೆ, ಒಡವೆಗಳು ಮತ್ತು ಸೀರೆಗಳು ಮಾರಾಟಕ್ಕಿದ್ದವು.

ಮೈಸೂರು: ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಮೈಸೂರಿನ ಜೆ. ಕೆ. ಗ್ರೌಂಡ್ ಮೈದಾನದಲ್ಲಿ ” ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬ ” ಆಯೋಜನೆಗೊಂಡಿದೆ. 15 ದಿನಗಳ ಕಾಲ ನಡೆದ ಈ ಪ್ರದರ್ಶನ ಮತ್ತು ಮಾರಾಟ ಮೇಳವು ಜನರನ್ನು ಆಕರ್ಷಿಸಿ, ಖರೀದಿಯ ಉತ್ಸಾಹವನ್ನು ಮೂಡಿಸಿದೆ.
ಈ ಮೇಳದಲ್ಲಿ ಗುಜರಾತ್, ಪಂಜಾಬ್, ಹೈದರಾಬಾದ್, ಚೆನೈ ಮತ್ತು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕರಕುಶಲ ವಸ್ತುಗಳ ಮಳಿಗೆಗಳು ಸ್ಥಾಪನೆಗೊಂಡಿದ್ದವು. ಗುಜರಾತ್‌ನಿಂದ ಕುರ್ತಿ, ಬಟ್ಟೆ, ಬ್ಯಾಗ್‌ಗಳು, ಮಹಿಳೆಯರಿಗೆ ಬಳೆ, ಒಡವೆಗಳು ಮತ್ತು ಸೀರೆಗಳು ಮಾರಾಟಕ್ಕಿದ್ದವು. ಇದೇ ರೀತಿ, ಮನೆ ಅಲಂಕಾರಕ್ಕಾಗಿ ರಾಧಾ-ಕೃಷ್ಣ, ಶಿವ, ಗಣೇಶ, ಬುದ್ಧ ಮತ್ತು ರಾಘವೇಂದ್ರ ಸ್ವಾಮಿಯ ಕಲಾಕೃತಿಗಳು ಸೊಗಸಾಗಿ ಮೂಡಿಬಂದಿದ್ದವು. ಈ ಕಲಾಕೃತಿಗಳು ಜನರ ಗಮನ ಸೆಳೆದವು.
ತಿನಿಸು ಪ್ರಿಯರಿಗೆ ರಾಜಸ್ತಾನದಿಂದ ತಂದ ಮಿಕ್ಸರ್, ಖಾರದ ವಸ್ತುಗಳು, ಉಪ್ಪಿನಕಾಯಿ, ಹಪ್ಪಳಗಳು ಮತ್ತು ಮೈಸೂರಿನ ಮಹಿಳೆಯೊಬ್ಬರು ತಯಾರಿಸಿದ ರಾಗಿ ಹಪ್ಪಳ, ಬೋಟಿ ತಿಂಡಿಗಳು ಲಭ್ಯವಿದ್ದವು. ಇವುಗಳು ಆರೋಗ್ಯಕರ ಮತ್ತು ರುಚಿಕರ ಆಯ್ಕೆಗಳಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದವು.

ಕೈಯಲ್ಲಿ ರಚಿತವಾದ ಆನೆ ಚಿತ್ರಗಳು, ಪುಸ್ತಕ ಮೇಳದಲ್ಲಿ ಕನ್ನಡ ಹೋರಾಟಗಾರರ ಪುಸ್ತಕಗಳು, ಇಂಗ್ಲಿಷ್ ಕವನ ಸಂಕಲನಗಳು ಮತ್ತು ಮನೆ ಅಲಂಕಾರಕ್ಕೆ ಗಡಿಯಾರ, ಉಯ್ಯಾಲೆ, ಮರದ ಟೇಬಲ್‌ಗಳು ಜನರ ಗಮನ ಸೆಳೆದವು. ಜೊತೆಗೆ, ಪಿಂಗಣಿಯಲ್ಲಿ ತಯಾರಾದ ಲೋಟ, ತಟ್ಟೆ ಮತ್ತು ಪುಟ್ಟ ಗೊಂಬೆಗಳು ಮೇಳಕ್ಕೆ ಮತ್ತಷ್ಟು ಮೆರುಗು ತಂದವು. ಈ ಶಾಪಿಂಗ್ ಹಬ್ಬವು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿದ್ದು, ಮೈಸೂರು ಜನತೆಗೆ ಖರೀದಿಯ ಜೊತೆಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ಅನುಭವವನ್ನು ಒದಗಿಸಿದೆ.

ವರದಿ ಜೆ. ಪ್ರದೀಪ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!