ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಂಜಿನ ಮೆರವಣಿಗೆ ಮೂಲಕ ಅಖಂಡ ಭಾರತದ ಸಂಕಲ್ಪ ಮಾಡಿದ ಬಜರಂಗದಳ ಕಾರ್ಯಕರ್ತರು.

ಯಾದಗಿರಿ/ ಗುರುಮಠಕಲ್: ಅ.೧೪ ಅಖಂಡ ಭಾರತ ಸಂಕಲ್ಪ ದಿವಸದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಅಂಬಿಗರ ಚೌಡಯ್ಯನವರ ವೃತ್ತದ ವರೆಗೆ ಪಂಜಿನ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ನಾರಾಯಣ ನೀರೆಟಿ ಗೌರವ ಅಧ್ಯಕ್ಷರು (ವಿ.ಹಿಂ.ಪ)
ಅಖಂಡ ಭಾರತ ಸಂಕಲ್ಪ ದಿನವನ್ನು ಆಗಸ್ಟ್ 14 ರಂದು ಭಾರತ ವಿಭಜನೆಯ ಕರಾಳ ದಿನವೆಂದು ಮತ್ತೆ ಭಾರತ ಅಖಂಡವಾಗಿಸುವ ಶಪಥ ಮಾಡೋಣ ಎಂದು ಹೇಳಿದರು.

ದೇಶದ ಏಕತೆ, ವಿಭಜನೆಯ ಇತಿಹಾಸ, ಅಖಂಡ ಭಾರತದ ಕನಸು ಕುರಿತಾಗಿ ರವಿ ಪೋತುಲ ಮಾತನಾಡಿ ನೆರದವರಿಗೆ ಅಖಂಡ ಭಾರತ ಸಂಕಲ್ಪ ದಿವಸದ ಆಚರಣೆಯ ಹಿಂದಿನ ವಿಚಾರವನ್ನು ಯುವಕರಿಗೆ ತಿಳಿಸಿದರು.

ಮೆರವಣಿಗೆಯಲ್ಲಿ ಶ್ರೀನಿವಾಸ್ ಯಾದವ್, ಅರುಣ್ ಕೇವ್ಜೀ, ಬಸವರಾಜ್ ಪಡಿಗೆ, ಈರಣ್ಣ ಬಾಗೋಜಿ, ರಾಮು ಕೊಗಂಟಿ, ಲಕ್ಷ್ಮಣ್ ಕುಂಬಾರ, ಜಗದೀಶ್ ಮೆಂಗಜೀ, ಭರತ್ ಮೀಟ್ಟೆ, ವಿಜಯ ರಜಪುತ್, ವಿಶಾಲ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ- ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!