ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಾ. ಮಲ್ಲೇಶ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪಿ. ಹೆಚ್. ಡಿ ಪದವಿ

ಡಾ. ಮಲ್ಲೇಶ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿ. ಹೆಚ್. ಡಿ ಪದವಿ ( ಡಾಕ್ಟರೇಟ್ ಪದವಿ ) ನೀಡಿದೆ. ಇವರು ಕನ್ನಡದಲ್ಲಿ ಗಜಲ್ ಕಾವ್ಯ : ವಿಭಿನ್ನ ಆಯಾಮಗಳು ( ಉತ್ತರ ಕರ್ನಾಟಕದ ಗಜಲ್ ಕವಿಗಳನ್ನು ಅನುಲಕ್ಷಿಸಿ ) ಎಂಬ ವಿಷಯ ಕುರಿತು ಡಿ.ಡಿ. ನಗರಕರ. ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶಿವಾನಂದ ಮಹಾವಿದ್ಯಾಲಯ ಕಾಗವಾಡ ತಾ. ಕಾಗವಾಡ ಜಿ. ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು. ಪ್ರಸ್ತುತ ಇವರು ರಾಯಚೂರಿನ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಸುತ್ತಿದ್ದಾರೆ.
ಡಾ. ಮಲ್ಲೇಶ್ ಅವರು ರಾಯಚೂರು ತಾಲ್ಲೂಕಿನ ಉಡಮಗಲ್ ಗ್ರಾಮದವರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉನ್ನತ ಪದವಿ ಪಡೆದಿರುವುದು ಬಹಳ ಶ್ಲಾಗಿನಿಯವಾದದ್ದು. ಇವರು ಹಳ್ಳಿಯ ಪ್ರತಿಭೆ. ಬಹಳ ಬಡತನದಿಂದ ಬೆಳೆದಿದ್ದಾರೆ. ಪ್ರತಿಭೆ ಹುಟ್ಟುವುದು ಗುಡಿಸಲಗಳಲ್ಲಿ ಹೊರತು ಬಂಗಲೆಗಳಲ್ಲಿ ಎನ್ನುವುದಕ್ಕೆ ಉತ್ತಮವಾದ ಉದಾಹರಣೆ ಅಂದರೆ ಡಾ. ಮಲ್ಲೇಶ್ ಅವರದು. ಇವರ ಸಾಧನೆಯನ್ನು ಇವರ ಬಂದು ಬಳಗ, ಗೆಳೆಯರು ಮತ್ತು ಸಹದ್ಯೋಗಿ ಮಿತ್ರರು ಇವರ ಶ್ರಮವನ್ನು ಮೆಚ್ಚಿ ಹರ್ಷವನ್ನು ವ್ಯಕ್ತಪಡಿಸಿ ಶುಭಾಶಯಗಳನ್ನು ಕೊರಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!