ಬುದ್ಧ ಬಸವ ಅಂಬೇಡ್ಕರರ
ತತ್ವ ಆದರ್ಶ ಹೊಗಳುವವರು
ತಮ್ಮ ಮನ ಮಲಿನಗೊಳ್ಳಲು
ಪರಿಶುದ್ಧಗೊಳಿಸಿ ಬಾಳದವರು
ಜನರು ಸೇರಿದ ವೇದಿಕೆಯಲ್ಲಿ
ಜ್ಞಾನಿಗಳಂತೆ ಮೆರೆಯುವರು
ನಿಜ ಜೀವನದ ಅರ್ಥವನು
ಇವರೆಂದು ಅರಿಯದವರು
ಆದರ್ಶ ಜೀವಿಗಳ ಬಗ್ಗೆ ಭವದಿ
ಬರಿ ಮಾತಲಿ ಕೊಂಡಾಡುವರು
ನೀತಿ ತಿಳಿಯದ ಈ ಕೋತಿಗಳು
ಉಂಡ ಮನೆಗೆ ಕೆಂಡ ಸುರಿವರು
ಬಾಳಿನಲ್ಲಿ ಆ ಬುದ್ಧನಂತೆ
ಅರಮನೆಯ ತೊರೆದವರಾರು
ಬದುಕಿನ ಸತ್ಯವನು ಹರವಿ
ಜನಮನದ ಕಣ್ಣು ತೆರೆದವರಾರು
ಬಾಳಿನಲ್ಲಿ ಬೆಳಕು ಚೆಲ್ಲಿರುವ
ನಿಜ ಬುದ್ದನ ಕಂಡವರಾರು
ಜ್ಞಾನದ ಬುತ್ತಿ ಬಿಚ್ಚಿಟ್ಟಿರಲು
ಹಸಿದು ಇಲ್ಲಿ ಉಂಡವರಾರು
- ಸಿದ್ಧರಾಮ ಸಿ ಸರಸಂಬಿ ಕಲಬುರ್ಗಿ✍️



















