ನಮ್ಮೂರ ಗುರುಗಳು
ನಮ್ಮ ಮಲ್ಲಿಕಾರ್ಜುನ ಗುರುಗಳು
ನಮ್ಮೂರ ಮನ ಮನೆಯಲಿ
ನೆಲೆಯಾದವರು
ಹೊಸನೆಲ್ಲುಡಿಯಿಂದ ಬಳ್ಳಾರಿವರೆಗೆ
ದಣಿವರಿಯದ ನಿರಂತರ
ಸೇವೆ ನಿಮ್ಮದು
ನೂರಾರು ಮಕ್ಕಳ ಬಾಳಿಗೆ
ಬೆಳಕಾದವರು
ಸದಾ ಮಂದಸ್ಮಿತ, ಹಸನ್ಮುಖಿ
ಪ್ರತಿ ಮಗುವಿನ ಮನವರಿತು
ಜ್ಞಾನವ ಕಟ್ಟಿಕೊಟ್ಟ
ಜ್ಞಾನದಾಸೋಹಿ ನೀವು
ಜ್ಞಾನ ದೇಗುಲದ
ಸಹಸ್ರ ಮೊಗ್ಗುಗಳು
ಬಿರಿದು ಅರಳಿ
ಹೂಗಂಧ ಹರಡುವುದ
ಪ್ರೀತಿಯಲಿ ಕಲಿಸಿದವರು
ಬಣ್ಣ ಬಣ್ಣದ ಪಟಗಳ
ಸೂತ್ರ ಕೈಯೊಳಿಡಿದು
ಎಳೆಯ ಕನಸುಗಳಿಗೆ ಬಣ್ಣ ಬರೆದು
ಬಾನೆತ್ತರ ಹಾರಿಸಿದ
ಸೂತ್ರಧಾರರು ನೀವು
ಮಕ್ಕಳು ನಿಮಗಭಿಮಾನಿಗಳು
ನಿಮ್ಮನುಕರಣಿಗಳು
ನಿಮ್ಮ ಭಾಷಣ ಶೈಲಿಗೆ,
ಸ್ನೇಹಶೀಲ ಗುಣಕೆ,
ಮುಂದಾಳುತನಕೆ, ಉದಾರ ಗುಣಕೆ,
ಸಂಘಟನಾ ಚಾತುರ್ಯಕೆ,
ಪರೋಪಕಾರ ಬುದ್ಧಿಗೆ
ಗುರುವಾಗಿ, ಬಂಧುವಾಗಿ
ತಂದೆಯಾಗಿ
ಕಾರುಣ್ಯದ ಬೆಳಕು ತೋರಿ
ಕೈ ಹಿಡಿದು ನಡೆಸಿದ ಗುರುಗಳು
ಮಲ್ಲಿಕಾರ್ಜುನ ಗುರುಗಳು.
- ಬಡಿಗೇರ ಮೌನೇಶ್, ಹೊಸಪೇಟೆ



















