ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ತಾಲೂಕಿನಲ್ಲಿ ಗಣಪತಿ ಸಂಭ್ರಮವೋ ಸಂಭ್ರಮ : ನೋಡುಗರ ಗಮನ ಸೆಳೆದ ವಿಶಿಷ್ಠ ಗಣಪತಿಗಳು

ಬಳ್ಳಾರಿ / ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಈ ಬಾರಿ ಸರ್ಕಾರದ ಮಾರ್ಗಸೂಚಿಯಂತೆ ವಿವಿಧ ಆಕರ್ಷಣೆಯ ಗಣಪತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿರುವುದು ಕಂಡು ಬಂತು.
ಕಳೆದ ಹದಿನೈದು ದಿನಗಳಿಂದ ಗಣೇಶನ ಮಂಡಳಿ ಹಾಗೂ ಸಮಿತಿಯವರು ಹಾಗೂ ಯುವಕರು ವಿವಿಧ ರೂಪಗಳ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯಂತೆ ಕೆಲವರು ಮಂಗಳವಾರ ಸಂಜೆ ಹಾಗೂ ಇನ್ನು ಕೆಲವರು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಅನೇಕ ಆಕರ್ಷಣೆಯ ಗಣಪತಿಗಳನ್ನು ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆಗಳ ಮೂಲಕ ಹಾಗೂ ತಮಟೆ, ತಾಷಾರಾಂಡೋಲ್ ಶಬ್ಧದ ನಾದದೊಂದಿಗೆ ಮೆರವಣಿಗೆ ಮಾಡಿಕೊಂಡು ಬಂದು ತಮ್ಮ ತಮ್ಮ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರು.
ಕಂಪ್ಲಿ ಪಟ್ಟಣದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ರೂಪದ ಗಣಪತಿ ಮೂರ್ತಿಗಳ ಪ್ರತಿಷ್ಠಾಪಿಸಿದ್ದು, ನೋಡುಗರ ಆಕರ್ಷಣೆಗೆ ಸಾಕ್ಷಿಯಾಯಿತು. ಆಯಾ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಗಣಪತಿಗಳಿಗೆ ವಿಶೇಷ ಪೂಜೆ, ಮಾಲಾರ್ಪಣೆ ಮಾಡುವ ಜತೆಗೆ ನೈವೇದ್ಯ ಅರ್ಪಿಸಲಾಯಿತು. ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಅನೇಕರು ಪ್ರತಿಷ್ಠಾಪನೆ ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಆಕರ್ಷಣೆಯ ಗಣಪತಿಗಳನ್ನು ನೋಡಿ ಕಣ್ತುಂಬಿಕೊಂಡರು. ಯಾವುದೇ ಗಲಾಟೆಯಾಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಸರ್ಜನೆಯ ಸ್ಥಳದಲ್ಲಿ ಸಿಸಿ ಕ್ಯಾಮೆರಾ,ಲೈಟಿಂಗ್ ಸೇರಿದಂತೆ ಸುರಕ್ಷತೆಗಾಗಿ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿರುವುದು ಕಂಡು ಬಂತು.ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 135ಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪಟ್ಟಣದ ಗಂಗಾನಗರ ಮುಂಭಾಗದಲ್ಲಿ ಹಿಂದೂ ಮಹಾಮಂಡಳಿ ಯುವಕರು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಲಯನ್ಸ್ ಗ್ರೂಪ್ ಯುವಕ ಸಂಘದಿಂದ ಬಿ. ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಚಾಮುಂಡಿದೇವಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರ ವೀರ ಕಂಪಿಲರಾಯ ವಿನಾಯಕ ಮಂಡಳಿಯವರು ಕಂಪ್ಲಿ ಕಾ ಮಹಾರಾಜ್ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಹೊಸ ಬಸ್ ನಿಲ್ದಾಣದ ಹತ್ತಿರ ಭಗತ್ ಸಿಂಗ್ ಬಾಯ್ಸ್ ತಂಡದವರು ಅಂಜಾನಾದ್ರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಬಾಲಗಂಗಾಧರ ತಿಲಕ್ ಯುವಕ ತಂಡದವರು ಬ್ರಾಹ್ಮಣ ಓಣಿಯಲ್ಲಿ ಹೂವಿನ ಗಣಪತಿ ಪ್ರತಿಷ್ಠಾಪಿಸಿದ್ದಾರೆ.

ಭಾರತ್ ಚಿತ್ರ ಮಂದಿರದ ಹತ್ತಿರ ಎವರ್ ಗ್ರೀನ್ ಪ್ರೆಂಡ್ಸ್ ಮಹಾರಾಜ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಸಿದ್ಧಿ ವಿನಾಯಕ ಉತ್ಸವ ಸಮಿತಿಯವರು ಮಾರುಕಟ್ಟೆ ರಸ್ತೆಯಲ್ಲಿ ಪುರಿ ಜಗನ್ನಾಥ್ ರೂಪದ ಗಣೇಶ ಮೂರ್ತಿಯನ್ನು ಕೂಡಿಸಿದ್ದಾರೆ.

ಪಟ್ಟಣದ ಎಲೆ ಮಾರುಕಟ್ಟೆ ಹತ್ತಿರ ಸರಾಫ್ ವರ್ತಕರು ಮತ್ತು ಕೆಲಸಗಾರರ ಸಂಘದವರು ಗಜಾನನ ಉತ್ಸವ ಸಮಿತಿಯಂದ ಗಣೇಶನನ್ನು ಕೂಡಿಸಿದ್ದಾರೆ.

ಪಟ್ಟಣದ ತೇರಿನ ಮನೆ ಮುಂದೆ ವಿನಾಯಕ ಯುವಕ ಮಂಡಳಿಯವರು ಪರಿಸರ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಮುದ್ದಾಪುರ ಅಗಸಿಯ ಹತ್ತಿರ ಕಂಪ್ಲಿ ಕಾ ಹಿಂದೂ ಸಾಮ್ರಾಟ್ ಸ್ನೇಹಿತರು ಕಾಡಿನ ರಾಜನ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಕುರುಗೋಡು ರಸ್ತೆಯ ಸನಾ ಪೇಟೆ ಈಶ್ವರೀಯ ವಿದ್ಯಾಲಯದ ಪಕ್ಕದಲ್ಲಿ ಎಸ್‌ಎನ್ ಪೇಟೆ ಬಾಯ್ಸ್ ತಂಡದವರು ಆರ್‌ಸಿಬಿ ಗಣೇಶನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಸತ್ಯನಾರಾಯಣ ಪೇಟೆಯ ಶಾರದಾ ಶಾಲೆ ಹತ್ತಿರ ಶ್ರೀ ವರಸಿದ್ಧಿ ವಿನಾಯಕ ಯುವಕ ಮಂಡಳಿಯವರು ತಿರುಪತಿ ಬಾಲಾಜಿ ರೂಪದ ಗಣೇಶ ಮೂರ್ತಿಯನ್ನು ಕೂಡಿಸಿದ್ದಾರೆ.

ಪಟ್ಟಣದ ಇಂದಿರಾ ನಗರದಲ್ಲಿ ಗಜಾನನ ಯುವಚೇತನಾ ಯುವಕರ ಸಂಘದವರು ಬೃಹತ್ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.

ವರಸಿದ್ಧಿ ವಿನಾಯಕ ಯುವಕರ ತಂಡ ಮಡ್ಡಿಕಟ್ಟೆಯ ವೃತ್ತದಲ್ಲಿ ವರಸಿದ್ಧಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಹಾರ್ಟ್ಬೀಟ್ ಯುವಕರ ತಂಡದವರು ರಥಧಾರಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.

ಹೀಗೆ ಪಟ್ಟಣದ ಎಲ್ಲೆಡೆ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ಜೋರಾಗಿದೆ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಗಣೇಶ ಮಹಾರಾಜ ರಾರಾಜಿಸುತ್ತಿದ್ದಾನೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!