
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಸಕರ ಅನುದಾನಿತ ಶಾಲೆ ಟೆಂಗಳಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಂಗಮ್ಮ ನಾಲವಾರ ಇವರು ಸರಕಾರದ ವಿವಿದ ಯೋಜನೆಗಳಾದ ವಿದ್ಯಾರ್ಥಿಗಳಿಗೆ ಕೊಡುವ ಶೂ-ಸಾಕ್ಸ್ ವಿತರಣೆ ಯೋಜನೆಯ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಎಸ್.ಡಿ.ಎಮ್.ಸಿ. ಅಧ್ಯಕ್ಷರ ಗಮನಕ್ಕೆ ತರದೇ ಸರ್ವಾಧಿಕಾರಿ ಧೋರಣೆ ಮಾಡಿ ಕಳಪೆ ಗುಣಮಟ್ಟದ ಶೂ-ಸಾಕ್ಸ್ ಖರೀದಿಸಿ ಹಣ ಉಳಿಸಿಕೊಂಡು ಉಳಿದ ಹಣ ಮುಖ್ಯೋಪಾಧ್ಯಾಯರು ಸ್ವಂತಕ್ಕೆ ಬಳಸಿಕೊಂಡು ಭ್ರಷ್ಟಚಾರ ಮಾಡಿದ್ದಾರೆ.
ಇಂಗ್ಲಿಷ್ ಮೀಡಿಯಂ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗಾಗಿ ಪಾಲಕರಿಂದ ರೂ.450/- ಫೋನ ಪೇ ಮಾಡಿಕೊಂಡಿರುತ್ತಾರೆ.
ಶಾಲೆಯಲ್ಲಿ ಇರುವ ಪುಸ್ತಕ ಹಾಗೂ ಬೆಂಚ್ ಮಾರಿ ಬಂದ ಹಣ ರೂ.4000 ,ರೂ.10000 ಅಧ್ಯಕ್ಷರ ಗಮನಕ್ಕೆ ತರದೇ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ.
ಸರಕಾರದಿಂದ ಬರುವ ಶಾಲೆಯ ಸ್ವಚ್ಚತೆಗೆ ಹಾಗೂ ಶಾಲೆ ನಿರ್ವಹಣೆಗಾಗಿ ಬರುವ ಹಣವನ್ನು ಖರ್ಚು ಮಾಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಶಾಲೆಯಲ್ಲಿ ತಿಪ್ಪೆಗುಂಡಿಯನ್ನಾಗಿ ಮಾಡಿರುತ್ತಾರೆ.
2020-21 ನೇ ಸಾಲಿನಲ್ಲಿ ನಬಾರ್ಡ್ ವತಿಯಿಂದ ಮಂಜೂರಾದ 2 ಕೋಣೆಗಳು ಸುಮಾರು 22.59 ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಿದ ಕೋಣೆಗಳು ಸಂಪೂರ್ಣ ಅವ್ಯವಸ್ಥೆ ಕೂಡಿದ್ದು, ತಿಪ್ಪಿಗುಂಡಿಯಂತೆ ಆಗಿದೆ. ಇವರು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ ಬಾಗಿಲು, ಕಿಟಕಿ, ಕಾಂಪೌಂಡ್ ಹಾಗೂ ವರಾಂಡ ಪರ್ಸಿ ಎಲ್ಲವೂ ಸಹ ಹಾಳಾಗಿ ಹೋಗಿವೆ. ಇವರು ಸುಮಾರು ವರ್ಷಗಳಿಂದ ಇಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಇಂತಹ ಬೇವಾಬ್ದಾರಿ ಮುಖ್ಯೋಪಾಧ್ಯಾಯರನ್ನು ಸೇವೆಯಿಂದ ವಜಾ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಕಲ್ಬುರ್ಗಿ ಯುವ ಘಟಕ ಅಧ್ಯಕ್ಷರು ಎನ್ ಕೆ ಅರ್ಜುನ್ ಅವರು ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಯಮನಪ್ಪ ಮಾದರ (ಕಾಳಗಿ)



















