ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಗೂರ ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಹದ ಪ್ರಯುಕ್ತ ಸಿದ್ದರಾಯ ದೇವರ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು.
ಗ್ರಾಮವನ್ನು ಸಿಂಗಾರಗೊಂಡಿತ್ತು. ಪಲ್ಲಕ್ಕಿ ಮೆರವಣಿಗೆಯ ಹಿಂದಿನ ದಿನ ಗ್ರಾಮದ ಸಿದ್ದರಾಯ ಡೊಳ್ಳಿನ ಸಂಘದ ಮುಖ್ಯ ಗಾಯಕ, ಶ್ರೀಶೈಲ ಗೌಳಿ ಹಾಗೂ ಮಾಳಿಂಗರಾಯ ಡೊಳ್ಳಿನ ಸಂಘದ ಬೀರಣ್ಣ ಪೂಜಾರಿ ಸಂಗಡಿಗರಿಂದ ಡೊಳ್ಳಿನ ಹಾಡುಗಳು ನಡೆದವು.
ಸಿದ್ದರಾಯ ದೇವರಿಗೆ ವಿಶೇಷವಾದ ಸಂಸ್ಕೃತಿ ನೇಮದ ಕರ್ತೃ ಗದ್ದುಗೆಗೇ ಅಭಿಷೇಕ ಪೂಜಾ విధి ವಿಧಾನಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಅಫಜಲಪುರಿನ ಬಾಗೋಡಿಸಿದ್ದೇಶ್ವ ಡೊಳ್ಳಿನ ಸಂಘದ ಮುಖ್ಯ ಗಾಯಕ, ಪುಂಡಲೀಕ ಮತ್ತು ಇಂಗಳೇಶ್ವರ ರೇವಣಸಿದ್ದೇಶ್ಚರ ಶಿವಣ್ಣ ಸಂಗಡಿ ಗರಿಂದ ಜಿದ್ದಾ ಜಿದ್ದಿ ಸವಾಲುಗಳ ಮೂಲಕ ಡೊಳ್ಳಿನ ಹಾಡುಗಳು ಜನರನ್ನು ಆಕರ್ಷಿಸುವಂತಿದ್ದರೆ, ಇನ್ನೊಂದಡೆ ಯುವಕರು ಮಕ್ಕಳು ಆಧುನಿಕ ಗೀತೆಗಳಿಗೆ ಕುಣಿದು ಕುಪ್ಪಳಿಸಿದ್ದರು. ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ವಿವಿಧ ‘ಕಡೆಯಿಂದ ಭಕ್ತರು ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಮತ್ತಿತ್ತರ ರಾಜ್ಯಗಳಿಂದ ಭಕ್ತಾದಿಗಳು ಸಿದ್ದರಾಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಗ್ರಾಮದ ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ ಭಕ್ತಾದಿಗಳಿಗೆ ಯಲ್ಲಪ್ಪ ಪೂಜಾರಿ (ಪಟ್ಟೇ) ಅನ್ನ ಪ್ರಸಾದ ವ್ಯವಸ್ಥೆ ಬಾಳೆಹಣ್ಣು ವಿತರಣೆಯನ್ನು ಬಸವರಾಜ ದೋಳಖೇಡ ,ಜಿಲೇಬಿ ಬಸವರಾಜ ಪೂಜಾರಿ ಹಾಗೂ 10 ಕಟ್ಟ್ ಅಕ್ಕಿ ಪ್ರಭು ಗೋಳಸಾರ, 1 ಕ್ವೀಟಲ್ ಗೋಧಿ,1 ಕ್ವೀಟಲ್ ಬೆಲ್ಲ ಹೀಗೆ ಜಾತ್ರೆ ಮಹೋತ್ಸವಕ್ಕೆ ಅನ್ನ ಪ್ರಸಾದ ಸೇವೆಗಾಗಿ ನೀಡಿದರು.
ಸಿದ್ದರಾಯ ದೇವಸ್ಥಾನ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರ ನೆರೆದಿತ್ತು. ಈ ಸಂದರ್ಭದಲ್ಲಿ ಯಲ್ಲಾಲಿಂಗ ಮಹಾರಾಯರು, ಬೀರಪ್ಪ ಮಹಾರಾಯರು, ಸಿದ್ದಪ್ಪ ಮಹಾರಾಯರು ಗ್ರಾ ಪಂ ಮಾಜಿ ಅಧ್ಯಕ್ಷ ಬೀರಪ್ಪ ನಾವದಗಿ, ಗ್ರಾ ಪಂ. ಸದಸ್ಯ ಸದಸ್ಯ ಶ್ರೀಶೈಲ್ ಗೌಳಿ, ಸಿದರಾಯ ಕಮೀಟಿ ಅಧ್ಯಕ್ಷ ಶರಣಪ್ಪ ಪೂಜಾರಿ, ಚಂದ್ರಶ್ಯಾ ಪೂಜಾರಿ, ರೇವಣಸಿದ್ದ ಪೂಜಾರಿ, ಗ್ರಾಪಂ ಮಾಜಿ ಸದಸ್ಯ ಭೀಮಾಶಂಕರ ನಾಯ್ಕೋಡಿ, ಜಗನ್ನಾಥ ಜಾಗೀರದಾರ್, ಶಿಕ್ಷಕ ಸಿದ್ದು ಸಾಲೋಟಗಿ, ಮಲ್ಲಿಕಾರ್ಜುನ ಬಿರಾದಾರ,ಮೈಬು ಶೇಖ, ಗೌಡಪ್ಪಗೌಡ ಪಾಟೀಲ್,ಹೂವಣ್ಣ ಪೂಜಾರಿ, ಹೀರೋಜ ಗೋಡ್ಕೆ, ಪೂಜಣ್ಣ ಪೂಜಾರಿ, ವಿಠ್ಠಲ ಪೂಜಾರಿ,ಅರ್ಜುನ ಪೂಜಾರಿ, ಪೀರಪ್ಪ ಕೋಳಿ, ಭೀಮಾಶಂಕರ ಪೂಜಾರಿ, ಗ್ರಾಮದ ಹಿರಿಯರು, ಮುಖಂಡರು, ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಮನೋಜ್ ನಿಂಬಾಳ



















