ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದ ಶ್ರೀ ವಿಶ್ವರಾಧ್ಯ ಗುರುಕುಲಮಠದ 47ನೇ ವರ್ಷದ ಪ್ರಣವ ಜ್ಯೋತಿ ಮಹಾರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರಗಿತು ಶ್ರೀ ಮಠದಿಂದ ಆರಂಭಗೊಂಡ ಮಹಾರಥೋತ್ಸವ ಗ್ರಾಮದ ರಾಜ್ಯ ಹೆದ್ದಾರಿ 29ರ ಮೂಲಕ ಎದುರು ಬಸವಣ್ಣನವರಿಗೆ ತೆರಳಿ, ಪುನಃ ಮಠಕ್ಕೆ ಮರಳಿತು ತೇರು ಸಾಗುವಾಗ ಭಕ್ತರು ಹೂವು ಹಣ್ಣು ಹರಕೆಯನ್ನು ತೀರಿಸಿದರು. ಕೊಪ್ಪಳ ಜಿಲ್ಲೆಯ ಚಿಲಕಮುಕಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸಾಹಸ ಜಾನಪದ ಅಲೆಮಾರಿ ಕಲಾವಿದರ ಸಂಘದ ಗೊಂಬೆ ಕುಣಿತ ತಾಶ ಪ್ರದರ್ಶನ ಸೇರಿದಂತೆ ನಂದಿಕೋಲು ಸಮಾಳ ಡೊಳ್ಳು ವಿವಿಧ ವಾದ್ಯ ತಂಡಗಳು ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಿದವು ಶ್ರಾವಣ ಮಾಸ ಅಂಗವಾಗಿ ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ 56ನೇ ವರ್ಷದ ಶಿವಶರಣ ತ್ರಿಕಾಲ ಜ್ಞಾನಿ ಎಮಿಗಿ 100 ಸಿದ್ದೇಶ್ವರ ಪುರಾಣ ಪ್ರವಚನ ಮಹಾಮಂಗಳಗೊಂಡಿತು.
ಹೆಚ್ ಎಂ ವಿಶ್ವೇಶ್ವರಯ್ಯ ಸ್ವಾಮಿ ಪುರಾಣ ಪ್ರವಚನಕ್ಕೆ ಎಸ್ ವೀರೇಶ್ ಪುರಾಣ ಪಟ್ಟಣ ಸಿಡಿ ಮೌನೇಶ್ ತಬಲಸಾತ್ ನೀಡಿದರು. ಇದಕ್ಕೂ ಮುನ್ನ ಶ್ರೀಮಠದಲ್ಲಿ ಪ್ರತಿಷ್ಠಾಪಿಸಿರುವ ಪಂಜಾಪೀಠಾಧೀಶ್ವರ ಶಿಲಾಮೂರ್ತಿ ಉಜ್ಜೈನಿ ಸಿದ್ದಲಿಂಗೇಶ್ವರ ತೆಮಿಗಿ 100 ಜಡೆ ಸಿದ್ದೇಶ್ವರ ನವಗ್ರಹ ಗಣೇಶ ಸ್ತ್ರೀ ಮಠ ಸಂಸ್ಥಾಪಕರಾದ ವೇದಮೂರ್ತಿ ಮಹಾದೇವ ತಾತ ಗೌರಮ್ಮ ಹಬ್ಬನವರ ಶೀಲಾ ಮೂರ್ತಿಗಳಿಗೆ ವಿಶೇಷ ರುದ್ರಾಭಿಷೇಕ ಗಂಗೆ ಸ್ಥಳ ಮಹೋತ್ಸವ ಹೋಮ ಅವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ಭಾವದಿಂದ ನಡೆದವು.
ಮೆಟ್ರಿ ಗ್ರಾಮ ಸದ್ಭಕ್ತರು ಸೇರಿದಂತೆ ವಿವಿಧ ಗ್ರಾಮದ ಅಂತರ್ ಜಿಲ್ಲೆಯಿಂದ ಬಂದ ಭಕ್ತಾದಿಗಳು ದೇವರ ಆಶೀರ್ವಾದವನ್ನು ಪಡೆದು ಪುನೀತರಾದರು.
ವರದಿ : ಜಿಲಾನಸಾಬ್ ಬಡಿಗೇರ್



















