ಬೆಳಗಾವಿ: ಕಾಗವಾಡ ಮೂಲಭೂತ ಸೌಕರ್ಯ ಹೊಂದಿದ ಅಂಗನವಾಡಿ ಕೇಂದ್ರಗಳಿಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜನಪ್ರಿಯ ಶಾಸಕರು ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಜು ಕಾಗೆ ಅವರಿಂದ ಟಿವಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಡಿ ಪಿ ಓ ರವೀಂದ್ರ ಗುದ್ದಗೆನ್ನವರ ಕಾಗವಾಡ ಸಿ ಡಿ ಪಿ ಓ ವ್ಯಾಪ್ತಿಯಲ್ಲಿ 312 ಅಂಗನವಾಡಿ ಕೇಂದ್ರಗಳು ಬರುತ್ತವೆ. ಅದರಲ್ಲಿ 74 ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯಗಳನ್ನು ಅಂದರೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ವಿದ್ಯುತ್ ಸಂಪರ್ಕ ಇರುವ ಅಂಗನವಾಡಿ ಕೇಂದ್ರಗಳಿಗೆ 43 ಇಂಚಿನ ಟಿವಿಗಳನ್ನು ಶಾಸಕರ ಅಮೃತ ಹಸ್ತದಿಂದ ಸಾಂಕೇತಿಕವಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ಇದೇ ಸಮಯದಲ್ಲಿ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















