ಬೆಂಗಳೂರು : ಡಾ. ಮಾರುತಿ ರಾಮ್ ಅವರಿಂದ ಉಪನ್ಯಾಸ ಹಾಗೂ KPTCL ನಿವೃತ್ತ ಇಂಜಿನಿಯರ್ ಶ್ರೀ ಹೆಚ್. ಶ್ರೀನಿವಾಸ ಅವರ ಪುತ್ರಿ ವಿದುಷಿ ರಂಜನಾ ಮತ್ತು ಸಂಗಡಿಗರಿಂದ ಭರತನಾಟ್ಯ, ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರಾಂಕಿತ ಸೀನಿಯರ್ ಅಡ್ವೋಕೇಟ್ ಶ್ರೀ ವಿಘ್ನೇಶ್ವರ ಶಾಸ್ತ್ರಿ ಹಾಗೂ ಕನ್ನಡಪ್ರಭ ದಿನಪತ್ರಿಕೆ, ಸುವರ್ಣ ನ್ಯೂಸ್ ಚಾನೆಲ್ ಪ್ರಧಾನ ಸಂಪಾದಕ ಶ್ರೀ ರವಿ ಹೆಗಡೆ ಅವರ ಉಪಸ್ಥಿತಿಯಲ್ಲಿ ಸಾಧಕದ್ವಯರಾದ ಎಂ ಎಸ್ ವೆಂಕಟೇಶ್ ಹೆಗಡೆ, ಎಂ ಎಸ್ ವಿನಾಯಕ ಹೆಗಡೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 13- 9 2025 ರ ಬೆಳಗ್ಗೆ 10 ಗಂಟೆಗೆ ಆನಂದ್ ರಾವ್ ವೃತ್ತದ ಬಳಿ ಇರುವ ನಮ್ಮ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಆಯೋಜಿಸಿದೆ ಎಂದು ಕಾರ್ಯಕ್ರಮ ನಿರ್ವಾಹಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















