ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಈದ್ ಮಿಲಾದ್: ಸಮತ್ವದ ಸಂದೇಶ ಸಾರಿದ ಪ್ರವಾದಿ

ಬಳ್ಳಾರಿ / ಕಂಪ್ಲಿ : “ಈದ್ ಮಿಲಾದ್” ಹಬ್ಬವನ್ನು ಕಂಪ್ಲಿ ಪಟ್ಟಣವನ್ನೊಳಗೊಂಡಂತೆ ಸುತ್ತಮುತ್ತಾಲಿನ ಹಳ್ಳಿಗಳಲ್ಲಿ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ಮೂಲಕ ಶ್ರದ್ಧೆ ಭಕ್ತಿಗಳಿಂದ ಅದ್ದೂರಿಯಿಂದ ಆಚರಿಸಿದರು. ಇಸ್ಲಾಂ ಧರ್ಮದ ಮಹಾನ್ ಮಾನವತಾವಾದಿ ಪ್ರವಾದಿ ಮಹಮ್ಮದ್ ಪೈಗಂಬರರ 1500 ನೇ ಜನ್ಮದಿನಾಚರಣೆ ಅಂಗವಾಗಿ ಮೆಕ್ಕಾ ಮದೀನಗಳ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಕೋಟೆಯ 13ನೇ ವಾರ್ಡ್ ನ ಝಂಡೆ ಕಟ್ಟೆಯಿಂದ ಹಳೇ ಪೋಲಿಸ್ ಠಾಣೆ, ಸಂತೆ ಮಾರುಕಟ್ಟೆ, ಹಳೇ ಬಸ್‌ನಿಲ್ದಾಣ, ಅಂಬೇಡ್ಕರ್ ಸರ್ಕಲ್, ನಡವಡಲ ಮಸೀದಿ ಮೂಲಕ ಗಂಗಾವತಿ ರಸ್ತೆಯ ದರ್ಗಾದಲ್ಲಿ ಗಣ್ಯರನ್ನು ಸನ್ಮಾನಿಸಿ ಸಿಹಿ ವಿತರಿಸಿ ಸಂಪನ್ನಗೊಂಡಿತು.
ಧರ್ಮಗುರುಗಳಾದ ಖಾನ್ –ಕಾ – ಯೇ – ದಿವಾನ್‌ಖಾನಾದ ಸೈಯ್ಯದ್ ಷಾ ಅಬುಲ್ ಹಸನ್ ಖಾದ್ರಿ ಉರ್ಫ್ ಆಜಂ ಪಾಷ ಸಾಹೇಬ್ ಸಜ್ಜಾದೆ ನಶೀನ್ ಮಾತನಾಡಿ 21ನೇ ಶತಮಾನವೂ ಸೇರಿದಂತೆ ಜಗತ್ತು ಸರ್ವ ಕಾಲಗಳಲ್ಲೂ ಸಮಾಜದ ಎದುರಿಸುತ್ತಾ ಬಂದ ಮತ್ತು ಬರುತ್ತಿರುವ ಅತಿ ದೊಡ್ಡ ಸವಾಲು ಅಸಮಾನತೆ ಪ್ರವಾದಿ ಮಹಮ್ಮದರು ಈ ಸವಾವಲನ್ನು ಯಶಸ್ವಿಯಾಗಿ ನಿಭಾಯಿಸಿದರು.
ಮಸೀದಿಯಲ್ಲಿ ಜಾತಿ-ಪಂಥಗಳ ಬಡವ-ಶ್ರಿಮಂತರೆಂಬ ಭೇದವಿಲ್ಲದೆ ಎಲ್ಲರೂ ಭುಜಕ್ಕೆ ಭುಜ ತಾಗಿಸಿ ಸಾಲಾಗಿ ನಿಂತು ಐದು ಬಾರಿಯ ನಮಾಜನ್ನು ಕಡ್ಡಾಯಗೊಳಿಸಿದರು. ಅನ್ಯಾಯ, ದುರ್ಬಲರ ನಾಶ, ಅಸಮಾನತೆ, ಅಸೂಯೆ, ಹಿಂಸಾಚಾರ, ಅಂಧಾನುಕರಣೆ, ಅನೈತಿಕತೆ ಮತ್ತು ಅನಿಷ್ಟ ಆಚರಣೆಗಳನ್ನು ಮಟ್ಟಹಾಕಲೆಂದು ಜನ್ಮತಾಳಿದವರು ಪೈಗಂಬರರು ಮಹಾತ್ಮರ ಜನ್ಮದಿನಾಚರಣೆಯನ್ನು ನಾವುಗಳು ಆಚರಿಸದರಷ್ಟೇ ಸಾಲದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಶಿವಚನ ನೀಡಿದರು.
ಶಾಸಕರಾದ ಜೆ. ಎನ್. ಗಣೇಶ್, ಕಂಪ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಉಪಾಧ್ಯಕ್ಷ ಎಂ. ಉಸ್ಮಾನ್ ಮೆರವಣಿಗೆಯಲ್ಲಿ ಭಾಗವಹಿಸಿ ಸನ್ಮಾನವನ್ನು ಸ್ವೀಕರಿಸಿ, ಎಲ್ಲಾ ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಷಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಳಾದ ಸೈಯದ್ ಷಾ ಅಬು ತರಾಬ್ ಖಾದ್ರಿ, ಸೈಯದ್ ಷಾ ಚಾಂದ್ ಪಾಷಾ ಖಾದ್ರಿ, ಸೈಯದ್ ಷಾ ಡಾ.ನೂರ್ ಅಹ್ಮದ್ ಖಾದ್ರಿ, ಸೈಯದ್ ಷಾ ಉಮೇಸ್ ಸಾಹೇಬ್ ಖಾದ್ರಿ, ಹಾಜಿ ಜಿಯಾವುದ್ದೀನ್ ರಿಜ್ವೀ ಎಲ್ಲಾ ಮಸೀದಿಗಳ ಇಮಾಮ್‌ರವರು ಮತ್ತು ಎಲ್ಲಾ ಮಸೀದಿಗಳ ಮುತವಲ್ಲಿಗಳು, ಈದ್‌ಮಿಲಾದ್ ಕಮಿಟಿ ಅಧ್ಯಕ್ಷ ಯು.ಜಹೀರುದ್ದೀನ್, ಉಪಾಧ್ಯಕ್ಷ ಎಂ.ನಾಸೀರ್‌ದ್ದೀನ್, ಪದಾಧಿಕಾರಿಗಳಾದ ಬಿ.ಇಮ್ರಾನ್, ಬಿ.ನೂರ್,ಅಬ್ದುಲ್ ಗಯಾಬ್, ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಈದ್‌ಮಿಲಾದ್ ಕಮಿಟಿ ವತಿಯಿಂದ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಯಾಸೀನ್ ಮಸೀದಿಯ ಚಂದ್ರಮದ್ಯದಲ್ಲಿನ ಮದೀನ ಸ್ತಬ್ದಚಿತ್ರಕ್ಕೆ ಮೊದಲ ಬಹುಮಾನ, ಸಕ್ಕರೆ ಕಾರ್ಖಾನೆಯ ಆಶ್ರಫಿ ಮಸೀದಿಯ ಮೆಕ್ಕಾಮದೀನಾ ಸ್ತಬ್ದಚಿತ್ರಕ್ಕೆ ಎರಡನೇ ಬಹುಮಾನಗಳನ್ನು ನೀಡಿ ಗೌರವಿಸಿದರು.
ಈದ್ ಮಿಲಾದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ನವೀನ್ ಕುಮಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿಐ ಕೆ.ಬಿ.ವಾಸುಕುಮಾರ್,ಪಿಎಸ್‌ಐ ಅವಿನಾಶ್ ಕಾಂಬ್ಳೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!