ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಇಂಚಲ ಗ್ರಾಮದಲ್ಲಿ ಶ್ರೀ ಸಿದ್ದರಾಮೇಶ್ವರ ಗಜಾನನ ಯುವಕ ಮಂಡಳಿ ಮಠದ ಓಣಿ 25ನೇ ವರ್ಷದ ರಜತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. 9ನೇ ದಿನ ಪರಮ ಪೂಜ್ಯ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳು ಇಂಚಲ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ 10ನೇ ದಿನ ಶ್ರೀ ಬಸವರಾಜ ಕರವಿನಕೊಪ್ಪ ಸಿಪಿಐ ಅಬಕಾರಿ ಪೊಲೀಸ್ ಇಲಾಖೆ ರಾಮದುರ್ಗ ಇವರು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಪ್ರತಿದಿನ ಅನ್ನ ಸಂತರ್ಪಣೆ ವಿವಿಧ ಪುಷ್ಪಗಳಿಂದ ಹೂವಿನ ಅಲಂಕಾರ ರಜತ ಮಹೋತ್ಸವವನ್ನು ಅದ್ದೂರಿಯಾಗಿ ವಿಶೇಷವಾಗಿ ಮತ್ತು ನೃತ್ಯ ರಸಮಂಜರಿ ಹಾಸ್ಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಜನರನ್ನು ಮನರಂಜಿಸುತ್ತಾ ಬಂದಿದ್ದಾರೆ. ಈರಪ್ಪ ಪಟ್ಟಣಶೆಟ್ಟಿ ಎಸ್ ಎಂ ಬೇವಿನಕೊಪ್ಪ, ರುದ್ರಪ್ಪ ಪಟ್ಟಣಶೆಟ್ಟಿ, ಎಫ್ ವೈ ಮಾರಿಯಾಳ, ಬಸಪ್ಪ ಮಲ್ಲೂರ್, ಎಸ್ ಎನ್ ಕೊಳ್ಳಿ, ಸಿದ್ದರಾಮ ಪಟ್ಟಣಶೆಟ್ಟಿ, ಶಿವಪುತ್ರ ಕೋಟೂರ, ವಿಶ್ವನಾಥ ಚನ್ನಿನಾಯ್ಕರ, ಪ್ರಸಾದ ಪಟ್ಟಣಶೆಟ್ಟಿ, ಕಾರ್ಯಕ್ರಮದಲ್ಲಿ ಇಂಚಲ ಗ್ರಾಮದ ಎಲ್ಲಾ ಗುರು ಹಿರಿಯರು ಹಾಗೂ ಮಠದ ಓಣಿಯ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಉಮೇಶ್ ಗೌಡರ



















