ಬಳ್ಳಾರಿ / ಕಂಪ್ಲಿ : ಕುಡತಿನಿ ಪಟ್ಟಣದ ಪ. ಪಂ ಬಳಿಯ ಮುಖ್ಯರಸ್ತೆ ಬದಿಯಲ್ಲಿ ಆರಂಭಗೊಂಡ ನೂತನ ಭರತ್ ಮತು ಭಗತ್ ಹಾರ್ಡ್ ವೇರ್ ಅಂಗಡಿಯನ್ನು ಶಾಸಕಿ ಈ. ಅನ್ನಪೂರ್ಣ ತುಕಾರಾಮ್ ಇವರು ಶುಕ್ರವಾರ ಉದ್ಘಾಟಿಸಿದರು.
ನಂತರ ಶಾಸಕಿ ಅನ್ನಪೂರ್ಣ ಮಾತನಾಡಿ, ಪ್ರಸ್ತುತ ಪ್ರತಿಯೊಂದು ಕಟ್ಟಡ ಕಾರ್ಯದಲ್ಲಿ ಬಳಕೆಯಾಗುತ್ತಿರುವ ಹಾರ್ಡ್ ವೇರ್ ಸಾಮಾಗ್ರಿಗಳನ್ನು ನೋಡಿದಾಗ ಹಾರ್ಡ್ ವೇರ್ ಮಾರಾಟ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಆರ್ಥಿಕ ಅಭಿವೃದ್ಧಿಗೆ ನಾಂದಿಯಾಗುತ್ತಿದೆ ಸಾಮಾನ್ಯವಾಗಿ ಮನೆ, ಕಟ್ಟಡ ನಿರ್ಮಾಣ ಮತ್ತು ರಸ್ತೆ ಸೇರಿದಂತೆ ಇನ್ನಿತರ ಯಾವುದೇ ನಿರ್ಮಾಣ ಕಾರ್ಯದಲ್ಲಿ ಹಾರ್ಡ್ ವೇರ್ ಸಾಮಾಗ್ರಿಗಳ ಪಾತ್ರ ಪ್ರಧಾನವಾಗಿರುತ್ತದೆ. ಕುಡತಿನಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಹಾರ್ಡ್ ವೇರ್ ಸಾಮಾಗ್ರಿಗಳನ್ನು ಖರೀದಿಸಬೇಕೆಂದು ದೂರದ ಬಳ್ಳಾರಿ ಸೇರಿದಂತೆ ಇನ್ನಿತರ ನಗರ ಪ್ರದೇಶಗಳಿಗೆ ತೆರಳಬೇಕಾಗಿತ್ತು. ಆದರೆ, ಈಗ ಕುಡತಿನಿ ಪಟ್ಟಣದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ ನೇತೃತ್ವದ ಭರತ್ ಮತ್ತು ಭಗತ್ ಹಾರ್ಡ್ ವೇರ್ ಶಾಪ್ ಆರಂಭಿಸಿದ್ದು, ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿನ ಅಂಗಡಿಯಲ್ಲಿ ಪೈಪ್, ಪೇಂಟಿಂಗ್, ಹೋಲ್ಡರ್ ಸೇರಿದಂತೆ ಪ್ರತಿಯೊಂದು ಸಾಮಾಗ್ರಿ ಮತ್ತು ಪರಿಕರಗಳು ಒಳ್ಳೆಯ ದರದಲ್ಲಿ ದೊರಕಲಿದ್ದು, ಜನರು ಸಾಮಾಗ್ರಿಗಳ ಖರೀದಿಗೆ ಮುಂದಾಗಬೇಕು ಎಂದರು.
ತದ ನಂತರ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಕೆ. ಎಸ್. ಎಲ್. ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬ್ರಪ್ಪ, ಪ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ, ಉಪಾಧ್ಯಕ್ಷ ಕನಿಕೇರಿ ಪಂಪಾಪತಿ, ಸದಸ್ಯ ವೆಂಕಟರಮಣಬಾಬು, ಮುಖಂಡರಾದ ದೊಡ್ಡಬಸಪ್ಪ, ಸತ್ಯಪ್ಪ, ದೊಡ್ಡೆಪ್ಪ, ವಿಕೆಸಿ ಚಂದ್ರಪ್ಪ, ಜನಾರ್ಧನ, ಅಂಬಣ್ಣ, ಗುರುಮೂರ್ತಿ, ಪ್ರತಾಪ್, ಮಹಾಂತೇಶ, ರಾಮ, ಗಂಗಾಧರ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















