
ಕಂಪ್ಲಿ / ಬಳ್ಳಾರಿ : ಪಟ್ಟಣದ ಯಾಸೀನ್ ಕಾಲೋನಿಯಲ್ಲಿರುವ ಮದರಸಾ ಅರೇಬಿಯಾ ಫೈಜಾನೆ ಖಾದ್ರೀಯಾದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನವನ್ನು ಶ್ರದ್ಧಭಕ್ತಿಯಿಂದ ಅರ್ಥಪೂರ್ಣವಾಗಿ ಅಚರಿಸಲಾಯಿತು.
ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಮೆಹೆಮೂದ್ ಖಾದ್ರಿ ಉರ್ಫ಼್ ರೈಸ್ ಸಾಹೇಬ್ ಸಜ್ಜಾದೇ ನಶೀನ್ ದರ್ಗಾ ಹಟ್ಟಿ ದೀವಾನ್ ಖಾನ್ ಕಂಪ್ಲಿ ರವರು ಮಾತನಾಡಿ ಶಾಂತಿ ಸಂದೇಶ ಸಾರುವ ಪ್ರವಾದಿ ಮಹ್ಮದ್ ಪೈಗಂಬರರು ಬಡವರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ನ್ಯಾಯ, ದುರ್ಬಲರ ನಾಶ, ಅಸಮಾನತೆ, ಅಸೂಯೆ, ಹಿಂಸಾಚಾರ, ಅಂದಾನುಕರಣೆ, ಅನೈತಿಕತೆ ಮತ್ತು ಅನಿಷ್ಟ ಆಚರಣೆಗಳನ್ನು ಮಟ್ಟಹಾಕಲೆಂದು ಜನ್ಮತಾಳಿದವರು ಪೈಗಂಬರರು. ಇಂತಹ ಮಹಾತ್ಮರ ಜನ್ಮದಿನಾಚರಣೆಯನ್ನು ನಾವುಗಳು ಆಚರಿಸದರಷ್ಟೇ ಸಾಲದು ಅವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮದರಸಾ ಅರೇಬಿಯಾ ಫೈಜಾನೆ ಖಾದ್ರಿಗಳು, ಮುಖ್ಯಸ್ಥ ಗುರುಗಳಾದ ಹಜರತ್ ಸೈಯ್ಯದ್‌ಷಾಹ್ ಅಬುತರಾಬ್ ಖಾದ್ರಿ, ಉರ್ಫ಼್ ಲೈಕ್ ಸಾಹೇಬ್ ನೇತೃತ್ವ ವಹಿಸಿದರು. ಮದರಸಾ ಅರೇಬಿಯಾ ಫೈಜಾನೆ ಖಾದ್ರಿಯಾದ ವಿದ್ಯಾರ್ಥಿಗಳಿಗೆ ಮೆಕ್ಕಾ ಮದೀನಗಳ ಸ್ತಬ್ಧ ಚಿತ್ರಗಳ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಇ.ಬಿ. ಹತ್ತೀರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರಮುಖರಾದ
ಎನ್. ಯೂನಸ್‌ಸಾಬ್, ರಫೀಕ್, ಅಬ್ದುಲ್‌ಸಾಬ್, ಮುನೀರಸಾಬ್, ಮೆಹೆಬೂಬ್‌ಸಾಬ್, ಗೌಸ್‌ಸಾಬ್, ಗಪ್ಪೂರಸಾಬ್ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















