ರಾಯಚೂರು/ ಲಿಂಗಸುಗೂರು : 2025-26ನೇ ಶೈಕ್ಷಣಿಕ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವು ಲಿಂಗಸಗೂರು ನಗರದಲ್ಲಿ ದಿನಾಂಕ 4/9/2025 ರಿಂದ 6/9/2025 ವರೆಗೆ ನಡೆದಿದ್ದು, ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಕ್ರೀಡೆಗಳಲ್ಲಿ ವಿಜೇತರಾಗಿದ್ದು, ಗುಂಪು ಆಟ ಹಾಗೂ ವೈಯಕ್ತಿಕ ಆಟಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಮಹಾವಿದ್ಯಾಲಯವು 2000-01 ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಿ 2025 ನೇ ಇಸ್ವಿಗೆ “25ನೇ” ವರ್ಷದ “ಬೆಳ್ಳಿ ಹಬ್ಬದ” ಸಂಭ್ರಮದಲ್ಲಿ ಕ್ರೀಡಾ ಸಾಧನೆಯ ಈ ಸಂಭ್ರಮವನ್ನು ಹೆಚ್ಚಿಸಿದೆ. ಕಳೆದ 25 ವರ್ಷಗಳಿಂದ ಸಾಧನೆಯ ಜೊತೆಗೆ ಕ್ರೀಡಾ ಸಾಧನೆಯ ಅವಿಸ್ಮರಣೀಯವಾಗಿದೆ.
ಮಹಾವಿದ್ಯಾಲಯದ ಕ್ರೀಡಾ ವಿಜೇತರ ವಿವರಗಳು :
ಬಾಲಕರ ಗುಂಪು ಆಟಗಳು :
ಬಾಲಕರ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ
ಬಾಲಕರ ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ
ಬಾಲಕರ ಥ್ರೋ ಬಾಲ್ ಆಟದಲ್ಲಿ ಪ್ರಥಮ ಸ್ಥಾನ
ಬಾಲಕರ ವೈಯಕ್ತಿಕ ಆಟಗಳು :
5000 ಮೀ. ಓಟದಲ್ಲಿ ಬೂದಿಬಸವ ಪ್ರಥಮ ಸ್ಥಾನ
5000 ಮೀ. ಓಟದಲ್ಲಿ ದುರ್ಗಪ್ಪ ದ್ವಿತೀಯ ಸ್ಥಾನ
1500 ಮೀ. ಮಹೇಶ್ / ಮರಿಸಿದ್ದಪ್ಪ ಪ್ರಥಮ ಸ್ಥಾನ
400 ಮೀ. ಮಹೇಶ್ / ಮರಿಸಿದ್ದಪ್ಪ ಪ್ರಥಮ ಸ್ಥಾನ
100 ಮೀ. ಓಟದಲ್ಲಿ ದರ್ಶನ್ ದೇವಪ್ಪ ಪ್ರಥಮ ಸ್ಥಾನ
4×100 ಮೀ ಓಟದಲ್ಲಿ ಪ್ರಥಮ ಸ್ಥಾನ
1)ದುರ್ಗಪ್ಪ / ಲಚ್ಮಪ್ಪ
2) ಮಹೇಶ್ ಮರಿಸಿದ್ದಪ್ಪ
3) ಬೂದಿಬಸವ / ಹನುಮಂತ
4) ಹನುಮೇಶ / ಅಂಬರೀಶ
ಬಾಲಕಿಯರ ಗುಂಪು ಆಟಗಳು:-
ಬಾಲಕಿಯರ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ
ಬಾಲಕಿಯರ ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ
ಬಾಲಕಿಯರ ವೈಯಕ್ತಿಕ ಆಟಗಳು:-
5000 ಮೀ. ಓಟದಲ್ಲಿ ಕಾವೇರಿ / ನಾಗಪ್ಪ ಪ್ರಥಮ ಸ್ಥಾನ
3000 ಮೀ. ಓಟದಲ್ಲಿ ಕಾವೇರಿ / ನಾಗಪ್ಪ ಪ್ರಥಮ ಸ್ಥಾನ
1500 ಮೀ. ರೇಣುಕಾ / ಬಸವರಾಜ್ ಪ್ರಥಮ ಸ್ಥಾನ
800 ಮೀ. ರೇಣುಕಾ / ಬಸವರಾಜ್ ದ್ವಿತೀಯ ಸ್ಥಾನ
100 ಮೀ. ಓಟದಲ್ಲಿ ಕಾವೇರಿ / ನಾಗಪ್ಪ ಪ್ರಥಮ ಸ್ಥಾನ
4×100 ಮೀ ಓಟದಲ್ಲಿ ಪ್ರಥಮ ಸ್ಥಾನ
1) ರೇಣುಕಾ / ಬಸವರಾಜ
2) ನಂದಿನಿ / ರಾಮಣ್ಣ
3) ಶಾಂತಲಾ / ಯಲಪ್ಪ
4)ಕಾವೇರಿ ನಾಗಪ್ಪ
4×400 ಮೀ ಓಟದಲ್ಲಿ ದ್ವಿತೀಯ ಸ್ಥಾನ
1) ದೀಪಾಶ್ರೀ / ಶಿವಪ್ಪ
2)ಶರಣಮ್ಮ ಬಸವರಾಜ
3)ಕಾವೇರಿ / ಬಸಪ್ಪ
4)ಯಶೋಧ ಚೆನ್ನಪ್ಪ
ಗುಂಡು ಎಸೆತದಲ್ಲಿ ಸೃಷ್ಟಿ ಹನುಮಪ್ಪ ದ್ವಿತೀಯ ಸ್ಥಾನ
ಉದ್ದ ಜಿಗಿತ ಸೃಷ್ಟಿ ಹನುಮಪ್ಪ ದ್ವಿತೀಯ ಸ್ಥಾನ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದರಿಂದ ಶ್ರೀ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಆಡಳಿತ ಅಧಿಕಾರಿಗಳು ಹಾಗೂ ಪ್ರಾಚಾರ್ಯರು ಮತ್ತು ಎಲ್ಲಾ ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
- ಕರುನಾಡ ಕಂದ




















