ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಭಾಜನರಾದ ಮುಖ್ಯಶಿಕ್ಷಕಿ ಶಿವಮ್ಮ ಅವರಿಗೆ ಸನ್ಮಾನ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ದು ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಶ್ರೀಮತಿ ಶಿವಮ್ಮ ಮುಖ್ಯಶಿಕ್ಷಕಿ ಭಾಜನರಾಗಿದ್ದು
ಇಂದು ಇವರಿಗೆ ಹಿರೇಜಂತಕಲ್ ಗ್ರಾಮದ ಅವರ ನಿವಾಸದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು ಇದೇ ಸಮಯದಲ್ಲಿ ಜಿಲ್ಲಾಧ್ಯಕ್ಷರಾದಂತ ದೊಡ್ಡ ಭರಮಣ್ಣ ಇವರು ಮಾತನಾಡಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ನಮ್ಮ ಶಿವಮ್ಮ ಮೇಡಂ ಅವರಿಗೆ ಸಿಕ್ಕಿರುವುದು ತುಂಬಾ ಸಂತೋಷದ ವಿಚಾರ ಮತ್ತು ನಮಗೆ ಇಂತಹ ಶಿಕ್ಷಕರು ನಮ್ಮ ಹೆಬ್ಬಾಳ ಗ್ರಾಮಕ್ಕೆ ಸಿಕ್ಕಿರುವುದೇ ನಮ್ಮ ಭಾಗ್ಯ ಇಂಥ ಶಿಕ್ಷಕರು ಸಿಗುವುದೇ ಅಪರೂಪ ಈಗಾಗಲೇ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದಂತ ಕೀರ್ತಿ ಇವರಿಗೆ ಸಲ್ಲುತ್ತದೆ, 18 ವರ್ಷಗಳ ಕಾಲ ಸೇವೆ ಸಲ್ಲಿಸಿರುವಂತಹ ನಮ್ಮ ಶಿವಮ್ಮ ಮೇಡಂ ಅವರು ನಿಜಕ್ಕೂ ನಮ್ಮ ಹೆಮ್ಮೆ ಅವರಿಗೆ ಆಯುಷ್ಯ ಆರೋಗ್ಯ ದೇವರು ಕರುಣಿಸಿ ಇನ್ನು ನಮ್ಮ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದಂತ ದೇವಪ್ಪ ಹಳ್ಳಿಗುಡಿ, ಪಾತಪ್ಪ ಹೆಬ್ಬಾಳ, ಹನುಮಂತಪ್ಪ ಬೇವೂರ್, ವೀರಣ್ಣನಾಗಲೀಕರ್, ಚಿನ್ನಮ್ಮ ಡಣಾಪುರ, ಬಿ ನಾಗರಾಜ್ ಡಣಾಪುರ, ಯಂಕೋಬ ಹೆಬ್ಬಾಳ, ರುದ್ರೇಶ್ ಹೆಬ್ಬಾಳ, ಬಾಂಬೆ ಉಮೇಶ್ ಇತರರು ಭಾಗಿ ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!