ತುಮಕೂರು ಜಿಲ್ಲೆಯ ಶಿರಾ ನಗರದ ಗುರುಭವನದ ನಿವೇಶನದಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಂ ಎಲ್ ಸಿ ಚಿದಾನದ ಎಂ ಗೌಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿರಾ ತಾಲೂಕಿನ ಅನೇಕ ಕಡೆ ಬರಗೂರಿನಲ್ಲಿ ಶಾಲೆ ಕಟ್ಟಡ, ತಾವರೆಕೆರೆ ಯಲ್ಲಿ ಶಾಲೆ ಕಟ್ಟಡ ಹಾಗೂ ಶಿರಾ ನಗರದ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡ ಕಾಮಗಾರಿ ಮಾಡಿದ್ದೇನೆ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಇತ್ತೀಚೆಗೆ ಮಾನ್ಯ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ ಎಲ್ಲಾ ಶಿಕ್ಷಕರಿಗೆ TET ಕಡ್ಡಾಯ ಎಂಬ ವಿಚಾರ ವನ್ನು ಪ್ರಸ್ತಾಪದ ಬಗ್ಗೆ ಮಾತನಾಡುತ್ತಾ ಗುರು ಭವನ ನಿರ್ಮಾಣಕ್ಕೆ ಹತ್ತು ಲಕ್ಷ ಕೊಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಾ ತಾಲೂಕಿನ ಶಾಸಕರಾದ T B ಡಾ.ಜಯಚಂದ್ರ, ವಿಧಾನ ಪರಿಷತ್ತು ಸದಸ್ಯ ಎಂ ಚಿದಾನಂದ ಗೌಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೃಷ್ಣಪ್ಪ ಸಂಪನ್ಮೂಲ ಅಧಿಕಾರಿಗಳಾದ ರಂಗಪ್ಪ ಹಾಗೂ brp ,crp ಹಿರಿಯ ಶಿಕ್ಷಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಕೊಟ್ಟ ಕರಿಯಣ್ಣ




















