ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧರ್ಮಸ್ಥಳದ ಮಂಜುನಾಥ ಸ್ವಾಮಿ ವಿರುದ್ದ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ – ಜೈ ಕ.ರ. ವೇ ಆಗ್ರಹ

ಕಲಬುರಗಿ/ಯಡ್ರಾಮಿ :ಇಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಯಡ್ರಾಮಿ ತಾಲೂಕಾ ಘಟಕದ ವತಿಯಿಂದ ಪಟ್ಟಣದ ಡಾ. ಬಿ ಆರ್. ಅಂಬೇಡ್ಕರ್ ವೃತ್ತದಲ್ಲಿ ಧರ್ಮಸ್ಥಳದ ವಿರುದ್ಧ ಕೆಲ ಯೂಟ್ಯೂಬ್ ಚಾನೆಲ್ ಗಳಿಂದ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಇತ್ತೀಚಿನ ದಿನಗಳಲ್ಲಿ ಈ ನಾಡಿನ ಹೆಸರಾಂತ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಶ್ರೀ ಮಂಜುನಾಥ ಸನ್ನಿದಿಯ ಕುರಿತು ಕೆಲ ಯೂಟ್ಯೂಬರ್ ಗಳು ಹಾಗೂ ವ್ಯಕ್ತಿಗಳು ಸುಳ್ಳು ಆರೋಪಗಳು ಹಾಗೂ ಅಪಪ್ರಚಾರ ಮಾಡುತ್ತಿರುವವರ ಗಮನಿಸಿದರೆ ಧರ್ಮಸ್ಥಳದ ಕ್ಷೇತ್ರಕ್ಕೆ ಮಸಿ ಬಳಿಯುವ ವ್ಯವಸ್ಥಿತವಾದ ಷಡ್ಯಂತ್ರ ರಚನೆಯಾಗಿದ್ದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಭಾಸವಾಗುತ್ತಿದೆ ಇದರ ಪರಿಣಾಮ ಧರ್ಮಸ್ಥಳ ಕ್ಷೇತ್ರದ ನಾಡಿನ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಮಾತಾಡಿದ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ತಾಲೂಕಾ ಅಧ್ಯಕ್ಷರಾದ ಅಮರನಾಥ್ ಸಾಹು ಕುಳಗೇರಿ ಧರ್ಮಸ್ಥಳ ಶ್ರೀ ಮಂಜುನಾಥನ ಭಕ್ತರು ನಾಡಿನಲ್ಲಿ ಅಲ್ಲದೆ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿದ್ದು ಧರ್ಮಸ್ಥಳ ಕ್ಷೇತ್ರ ನಾಡಿನ ದೇವಸ್ಥಾನಗಳ ಜೀರ್ಣೋದ್ದಾರ, ವ್ಯಸನಗಳ ಮುಕ್ತ ಜಾಗೃತಿಯ ಶಿಬಿರಗಳು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಾಲದ ಸಹಾಯ ಧನ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು, ಯುವಕ ಮತ್ತು ಯುವತಿಯರಿಗೆ ಉದ್ಯೋಗ, ಬಡವರಿಗೆ ಉಚಿತ ಸಾಮೂಹಿಕ ವಿವಾಹ, ನಿರ್ಗತಿಕರಿಗೆ ಉಚಿತ ಆರೋಗ್ಯ ಸೇವೆ, ಅನ್ನದಾಸೋಹ, ಅಕ್ಷರ ದಾಸೋಹ ನಿತ್ಯ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳು ಆ ಪುಣ್ಯ ಕ್ಷೇತ್ರದಿಂದ ನಡೆಯುತಿದ್ದು, ಈ ನಾಡಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಪಾರವಾದಂತಹ ಕೊಡುಗೆಯನ್ನಾಗಿ ನೀಡಿದ್ದು ಅವಿಸ್ಮರಣಿಯವಾದದ್ದು ಇದರ ಬಗ್ಗೆ ಪ್ರಚಾರ ಮಾಡದೆ ಆ ಕ್ಷೇತ್ರವನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಅಪಪ್ರಚಾರ ಗೈದು ಕಳಂಕ ತರುವ ಹುನ್ನಾರವನ್ನು ಮಾಡುತ್ತಿದ್ದಾರೆ ಇದನ್ನು ಜೈ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಖಂಡಿಸುತ್ತದೆ
ಈಗಾಗಲೇ ಸಮಗ್ರ ತನಿಖೆಗಾಗಿ ಎಸ್. ಐ. ಟಿ ತಂಡ ರಚನೆಯಾಗಿದ್ದು ಆ ಸದರಿ ಸಂಸ್ಥೆಯಿಂದ ತನಿಖೆ ನಡೆಯುತ್ತಿದ್ದು ಅವರ ತನಿಖಾ ವರದಿ ಬರುವ ಮುಂಚೆ ಕೆಲ ಯೂಟ್ಯೂಬರಗಳು ಹಾಗೂ ವ್ಯಕ್ತಿಗಳು ತಮ್ಮ ಮನಸ್ಸಿಗೆ ಬಂದಂತೆ ಊಹಿಸಿಕೊಂಡು ಹೇಳಿಕೆ ನೀಡುವುದರಿಂದ ತನಿಖಾ ತಂಡಕ್ಕೆ ದಾರಿ ತಪ್ಪಿಸುತ್ತಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಾಗಿದೆ ತನಿಖಾ ಹಂತದಲ್ಲಿರುವದರಿಂದ ಇಲ್ಲ ಸಲ್ಲದ ಹೇಳಿಕೆ ಕೊಡುವವರ ಹಾಗೂ ಯೂಟ್ಯೂಬರ್ ಚಾನಲ್ ತಮ್ಮ ಮೂಗಿನ ನೇರಕ್ಕೆ ಸೃಷ್ಟಿಸಿ ಸುಳ್ಳು ವರದಿ ಮಾಡುವವರನ್ನು ಕೂಡಲೇ ಕಾನೂನಿನ ಸೂಕ್ತ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು ಹಾಗೂ ಪುಣ್ಯ ಕ್ಷೇತ್ರ ಧರ್ಮಸ್ಥಳವನ್ನು ರಕ್ಷಿಸಬೇಕು ಎಂದು ಯಡ್ರಾಮಿ ಪಟ್ಟಣದ ಡಾ।। ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಯಡ್ರಾಮಿ ತಾಲೂಕಾ ಮುಖಂಡರಾದ ಈರಣ್ಣ ಸಾಹು ಸುಂಕದ, ಮಲ್ಲಿಕಾರ್ಜುನ ಹೂಗಾರ್, ಸಾಹೇಬಗೌಡ ದೇಸಾಯಿ, ಬಿಸಿಲು ಲಾಳೆಸಾಬ್ ಮನಿಯಾರ್, ಜೈ ಕ.ರ. ವೇ ಯುವ ಘಟಕದ ತಾಲೂಕಾ ಅಧ್ಯಕ್ಷರಾದ ಪ್ರಭು ದೊರೆ ಸುಂಬಡ , ಜೈ ಕ.ರ. ವೇ ನಗರ ಘಟಕದ ಅಧ್ಯಕ್ಷರಾದ ಮಡಿವಾಳ ಮೇಲಿನಮನಿ, ಭರತ್ ದೊರೆ ನಾಗಪ್ಪ ಸಜ್ಜನ್, ಗಂಗಾದರ ಕರಕಿಹಳ್ಳಿ, ಯಲ್ಲಾಲಿಂಗ ಹರನಾಳ್, ದೇವು ಯಡ್ರಾಮಿ, ಮಹೇಶ್ ಪಾಟೀಲ್ ಕಡಕೋಳ, ಪರಶುರಾಮ್ ಟಣಕೇದಾರ್ ಸುಂಬಡ, ಸಂತೋಷ ಹರನೂರ್, ಲಕ್ಷ್ಮಣ ಕರಂಡಿ ಸುಂಬಡ್ , ಮಾಂತು ಮರಾಠಿ ಸುಂಬಡ್, ಸಿದ್ದು ವಿಶ್ವಕರ್ಮ ಸುಂಬಡ್, ಸಚಿನ್ ಮಲ್ಕುಡಿ ಸುಂಬಡ ಹಾಗೂ ಯಡ್ರಾಮಿಯ ಸಾರ್ವಜನಿಕರು ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸಿದ್ದರು.

ವರದಿ ರಾಚೋಟಯ್ಯ ಹಿರೇಮಠ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!