ಬಳ್ಳಾರಿ / ಕಂಪ್ಲಿ : ಸ್ಥಳೀಯ ಪುರಸಭೆ ವ್ಯಾಪ್ತಿಯ 5 ಮತ್ತು 12ನೇ ವಾರ್ಡು ಇಂದಿರಾನಗರದಲ್ಲಿ ಕಳೆದ ನಾಲ್ಕು ದಶಕಗಳ ವಸತಿ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದು ಶಾಸಕ ಜೆ. ಎನ್. ಗಣೇಶ್ ತಿಳಿಸಿದರು.
ಅವರು ಪಟ್ಟಣದ 5ನೇ ವಾರ್ಡು ಇಂದಿರಾ ನಗರದಲ್ಲಿ ಪುರಸಭೆ ಸದಸ್ಯೆ ಸುಮಾ ರಾಘವೇಂದ್ರ ಅವರು ಆಯೋಜಿಸಿದ್ದ ಸ್ಥಳೀಯ ನಿವಾಸಿಗಳಿಗೆ ಪುರಸಭೆಯಿಂದ ಫಾರಂ ನಂ 3 ವಿತರಣಾ ಕಾರ್ಯಕ್ರಮದಲ್ಲಿ ನಿವಾಸಿಗಳಿಗೆ ಫಾರಂ ನಂ-3 ಗಳನ್ನು ವಿತರಿಸಿ ಮಾತನಾಡಿ 5 ಮತ್ತು 12ನೇ ವಾರ್ಡಿನ ಇಂದಿರಾ ನಗರ ನಿವಾಸಿಗಳು ಸುಮಾರು 50-60 ವರ್ಷಗಳಿಂದ ವಾಸಿಸುತ್ತಿದ್ದು, ಇವರಿಗೆ ಅನೇಕ ವರ್ಷಗಳವರೆಗೆ ಮನೆ ಮತ್ತು ನಿವೇಶನಗಳಿಗೆ ಹಕ್ಕು ಪತ್ರಗಳೇ ಇರಲಿಲ್ಲ, ಇವರಿಗೆ ಕಳೆದ ವರ್ಷ ಪುರಸಭೆ ಸದಸ್ಯೆ ಸುಮಾ ಮತ್ತು ಅವರ ಪತಿ ಆಟೋ ರಾಘವೇಂದ್ರ ಅವರು ನಿರಂತರವಾಗಿ ಶ್ರಮಿಸಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ಪುರಸಭೆಯಿಂದ ಅಧಿಕೃತವಾಗಿ ವಿತರಿಸಿದ್ದರು. ಇದೀಗ ಇಲ್ಲಿನ ಸುಮಾರು 92 ನಿವಾಸಿಗಳಿಗೆ ಪುರಸಭೆಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಅವರಿಗೆ ಇಂದು ಫಾರಂ ನಂ 3ಯನ್ನು ವಿತರಿಸುವ ಮೂಲಕ ಅವರ ಋಣವನ್ನು ತೀರಿಸುವ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ವಾರ್ಡಿನಲ್ಲಿ ಉತ್ತಮವಾದ ರಸ್ತೆ, ಕುಡಿಯುವ ನೀರು ಹಾಗೂ ಬೀದಿ ದೀಪಗಳನ್ನು ಒದಗಿಸುವ ಮೂಲಕ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ ಇಂದಿರಾ ನಗರದ ನಿವಾಸಿಗಳಿಗೆ ಇದೀಗ ಅಧಿಕೃತವಾಗಿ ಫಾರಂ ನಂ 3ಗಳನ್ನು ವಿತರಿಸಿದ್ದು, ಅವರುಗಳಲ್ಲಿ ಮನೆ ಇಲ್ಲದವರಿಗೆ ಸರ್ಕಾರದಿಂದ ಮುಂದಿನ ದಿನಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡವುದಾಗಿ ಭರವಸೆಯನ್ನು ನೀಡಿದರು.ಮನೆ ಬಾಗೀಲಿಗೆ ಪುರಸಭೆ ಆಡಳಿತ ಎನ್ನುವ ಉದ್ದೇಶದಿಂದ ನಿವಾಸಿಗಳ ಮನೆಗೇ ಫಾರಂ3 ಗಳನ್ನು ವಿತರಿಸಲಾಗುತ್ತಿದೆ ಎಂದರು.
ನಂತರ ಎರಡು ವಾರ್ಡುಗಳ ಸುಮಾರು 92 ನಿವಾಸಿಗಳಿಗೆ ಫಾರಂ ನಂ 3 ಗಳನ್ನು ವಿತರಣೆ ಮಾಡಿದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್,ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಎಂ.ಉಸ್ಮಾನ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ,ಸದಸ್ಯರಾದ ಸುಮಾ ರಾಘವೇಂದ್ರ, ಸಿ.ಆರ್.ಹನುಮಂತ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಮುಖಂಡರಾದ ಶೇಕ್ಷಾವಲಿ, ಜಿ.ಗೋಪಾಲ್, ಶ್ರೀನಿವಾಸ್, ಸುಧಾಕರ್, ಮಸ್ತಾನ್ ಸೇರಿದಂತೆ ವಾರ್ಡಿನ ಸಾರ್ವಜನಿಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















