ಕಾಲವು ಬದಲಾದ ಈ ಒಂದು ಸಮಯದಲ್ಲಿ
ಅಚ್ಚ ಹಸುರಿನ ಪರಿಸರ ಕಾಣೆಯಾಗಿದೆ
ಕೊಡಲಿ ಏಟು ತಿಂದ ಮರಗಳು
ಧರೆಯಲ್ಲಿ ಉರಳಿವೆ
ಖಗಾಮೃಗ ಪ್ರಾಣಿಗಳು ಕಾಡಿನಿಂದ ಹೊರ ಬರುತ್ತಲೇ ಇವೆ
ಮನುಷ್ಯ ಜನ್ಮವು ಇಷ್ಟು
ಸ್ವಾರ್ಥಿಯಾಗಿರುವನು ಇಲ್ಲಿ
ತನ್ನ ಸುಖ ಸಂಪತ್ತಿನ ಆಸೆಗಾಗಿ
ಕೊಳ್ಳಿ ಇಟ್ಟಿರುವನು ಪ್ರಕೃತಿಯ ಮಡಿಲಲ್ಲಿ
ಚಿಕ್ಕ ಚಿಕ್ಕ ಗಿಡ ನೆಡುವ ಸಮಯವಿಲ್ಲದೆ
ಕೃತಕ ಗಾಳಿಗೆ ಮಾರುಹೋಗಿರುವನು ಇವನಿಲ್ಲಿ
ಕಾಡುಗಳನ್ನು ನಾಶ ಮಾಡಿ ಮನೆಯ ಕಟ್ಟುವವರು ಇವರುಗಳೆಲ್ಲ
ನೈಸರ್ಗಿಕ ಗಾಳಿಗೆ ಕೊಳ್ಳಿ ಇಟ್ಟಿರುವೆವು ನಾವುಗಳೆಲ್ಲ
ಎಲ್ಲರೂ ಕೈಯ್ಯ ಕಟ್ಟಿಕೊಂಡು ಕುಳಿತರೆ ಪ್ರಯೋಜನವಿಲ್ಲ.
ಪ್ರಕೃತಿಯನ್ನು ಹಸಿರಾಗಿಸಲು ಒಂದೊಂದು ಗಿಡ ನೆಡಬೇಕು ನಾವುಗಳೆಲ್ಲ.
- ಎಂ. ಚಂದ್ರಶೇಖರ ಚಾರಿ,
ಶಿಕ್ಷಕರು, ಚಿತ್ರದುರ್ಗ.



















