ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೋದಿ ಇದ್ದರಷ್ಟೇ ಭಾರತ ದೇಶದ ಅಭಿವೃದ್ಧಿ ಸಾಧ್ಯ : ಪಂಪಾಪತಿ .ಹೆಚ್.

ಬಳ್ಳಾರಿ / ಕಂಪ್ಲಿ : ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಎಮ್ಮಿಗನೂರಿನ ಶ್ರೀ ಆಂಜನೇಯ ದೇವಾಲಯದ ಮುಂಭಾಗದಲ್ಲಿ ರಕ್ತದಾನ ಶಿಬಿರ ಮಾಡುವುದರ ಮೂಲಕ ಬುಧವಾರ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 75ನೇ ಜನ್ಮದಿನವನ್ನು ತುಂಭಾ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಂಬೇಡ್ಕರ್ ವಿಚಾರವಾದಿಗಳು ಎಮ್ಮಿಗನೂರಿನ ಪಂಪಾಪತಿ .ಹೆಚ್. ಅವರು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಸ್ವಚ್ಚ ಭಾರತ ಹಾಗೂ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆಯ ಮೂಲಕ ಹಸಿವು ನಿವಾರಣೆಗೆ ಆದ್ಯತೆ, ಉಜ್ವಲ ಯೋಜನೆಯೊಂದಿಗೆ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್, ಆಯುಷ್ಮಾನ್ ಭಾರತ, ಆರೋಗ್ಯ ಯೋಜನೆಯಡಿ ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ ಅರ್ಹ ರೈತರಿಗೆ ಕನಿಷ್ಟ ಹಣಕಾಸು ನೆರವು, ಕೋರೋನಾ ಸಂದರ್ಭದಲ್ಲಿ ಗರೀಬ್ ಕಲ್ಯಾಣ್ ಅನ್ನಯೋಜನೆಯ ಮೂಲಕ ಬಡವರಿಗೆ ಉಚಿತ ಪಡಿತರ ವಿತರಣೆ, ದೇಶದ ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸಲು ಮನೆ ಮನೆಗೆ ನೀರಿನ ನಲ್ಲಿ ಯೋಜನೆ, ಕೋರೋನಾ ಕಠಿಣ ಸಮಯದಲ್ಲಿ ವಿಶ್ವದಲ್ಲಿ ಅತ್ಯಂತ ದೊಡ್ಡ ಲಸಿಕಾ ಕೇಂದ್ರ ಯೋಜನೆ, ಜನಧನ ಯೋಜನೆ.ಮುದ್ರಾಯೋಜನೆ.ಬೀದಿಬದಿ ವ್ಯಾಪಾರಿಗಳಿಗೆ ಸಾಲ,ಕ್ರಷಿ ಮೂಲ ಸೌಕರ್ಯಗಳಿಗೆ ಹಣ, ನೇರ ನಗದು ಖಾತೆಗೆ ಹಣ, ಪಸಲ್ ವಿಮಾ ಯೋಜನೆ. ಜನೌಷಧಿ ಕೇಂದ್ರಗಳ ಸ್ಥಾಪನೆ. ಈ-ಶ್ರಮ ಕಾರ್ಡ್, ಅವಾಸ್ ಯೋಜನೆ, ಸುಕನ್ಯಾ ಸಮೃದ್ದಿಯೋಜನೆ ಹೀಗೆ ಮೋದಿಯವರ ಸಾಧನೆಗಳ ಬಗ್ಗೆ ತಿಳಿಸಿದರು.

ನಂತರ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಹಂಪಿ ಸಾವಿರ ದೇವರ ಮಠ ಎಮ್ಮಿಗನೂರು ಇವರು ಮಾತನಾಡಿ ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ ಹಾಗೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಿಲ್ಲ, ರಕ್ತವನ್ನು ಮನುಷ್ಯನ ಧಾನದಿಂದ ಪಡೆಯಬಹುದಾಗಿದೆ. ವೈದ್ಯಲೋಕ ಎಷ್ಟೇ ಮುಂದುವರೆದರು ಕೃತಕ ರಕ್ತವನ್ನು ಸಾದ್ಯವಾಗಿಲ್ಲ ಹಾಗಾಗಿ ರಕ್ತದಾನಿಗಳ ನೆರವನ್ನು ಪಡೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕಂಪ್ಲಿ ಮಂಡಲದ ಅಧ್ಯಕ್ಷರಾದ ಸಿ. ಡಿ. ಮಹಾದೇವ ಅವರು ಮಾತನಾಡಿ ದಾನದಲ್ಲಿ ಅತಿ ಶ್ರೇಷ್ಟವಾದ ದಾನ ಎಂದರೆ ಅದು ರಕ್ತದಾನ ಮಾಡುವುದರ ಮೂಲಕ ಹಲವು ರೋಗಿಗಳ ಜೀವವನ್ನು ಉಳಿಸುವುದು ತುಂಭಾ ಪುಣ್ಯದ ಕೆಲಸವಾಗಿದೆ ಹಾಗೆಯೇ ರಕ್ತಧಾನವು ಜೀವದಾನಕ್ಕೆ ಸಮವಾಗಿದೆ ಎಂದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಜೀರವರ ಹುಟ್ಟು ಹಬ್ಬದ ಅಂಗವಾಗಿ ಕಂಪ್ಲಿ ಮಂಡಲ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು ಹಾಗೂ ಬ್ರೇಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಜಡೇಶತಾತನವರು, ಕಂಪ್ಲಿ ಪುರಾಸಭೆ ಸದ್ಯಸರಾದ ಸುದರ್ಶನ್ ರೆಡ್ಡಿ, ಎಸ್.ಎಮ್.ನಾಗರಾಜ್, ಡಾ. ವಿ.ಎಲ್.ಬಾಬು, ಪ್ರಮುಖರಾದ ಬಿ. ರಮೇಶ, ಟಿ.ರಾಮು. ಮುದ್ದೆ ಈರಮ್ಮ, ಪದ್ಮಾವತಿ, ರಬಿಯಾ, ಶರಣ ಗೌಡ, ಬಡಿಗೇರ ವೀರೇಶ, ಮಲ್ಲೇಶ, ಹನುಮೇಶ, ಮಹೇಶ ಗೌಡ, ಸದಾಶಿವಪ್ಪ ಧಣಿ, ಅಶ್ವತ್ ರೆಡ್ಡಿ, ವೆಂಕಟರೆಡ್ಡಿ, ವಿರುಪಾಕ್ಷಿ ಸ್ವಾಮಿ, ನಾರಾಯಣ ಹಾಗೂ ಊರಿನ ಸಮಸ್ತ ಗುರು ಹಿರಿಯರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!