ಬಳ್ಳಾರಿ/ ಕುರುಗೋಡು: ಸ್ವಸ್ಥ ನಾರಿ- ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಕುರುಗೋಡು ಇವರ ಸಹಯೋಗದೊಂದಿಗೆ
ಕುರುಗೋಡು ಸಮುದಾಯ ಅರೋಗ್ಯ ಕೇಂದ್ರದ ಸಭಾಂಗಣದ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಕೇಂದ್ರದಲ್ಲಿ ಸಾರ್ವಜನಿಕರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಆರೋಗ್ಯ ಶಿಕ್ಷಣ ಕೇಂದ್ರಕ್ಕೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಮಂಜುನಾಥ ಜವಳಿ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಮೊಹಮ್ಮದ್ ರಫೀಕ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಮಂಜುನಾಥ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ನುರಿತ ತಜ್ಞ ವೈದ್ಯರುಗಳಾದ ನೇತ್ರಾ ಚಿಕಿತ್ಸಾ ವಿಭಾಗದಿಂದ ಡಾ. ಪ್ರಿಯ ನೇತ್ರಾಧಿಕಾರಿ ವಿಭಾಗದಿಂದ ಹೊನ್ನಪ್ಪ, ಕಿವಿ ಮೂಗು ಮತ್ತು ಗಂಟಲು ತಜ್ಞ ವಿಭಾಗದಿಂದ ಡಾ. ಸಂಜಯ್.ಎ, ದಂತ ಚಿಕಿತ್ಸಾ ವಿಭಾಗದಿಂದ ಡಾ. ವಿಕಾಸ್, ಚರ್ಮರೋಗ ಮತ್ತು ಲೈಂಗಿಕ ಶಾಸ್ತ್ರ ವಿಭಾಗದಿಂದ ಡಾ. ರಮ್ಯ, ಮಾನಸಿಕ ರೋಗ ಶಾಸ್ತ್ರ ವಿಭಾಗದಿಂದ ಡಾ. ಶೇಕ್ ಸೈಫುಲ್ಲಾ, ನೇತ್ರಾಧಿಕಾರಿ ಡಾ. ಪಲ್ಲವಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-Ark ) ಆರೋಗ್ಯ ಮಿತ್ರ ಪಿ. ಹೊನ್ನೂರ್ ಸಾಬ್. ಸ್ನೇಹಾ ಕ್ಲಿನಿಕ್ ಆಪ್ತ ಸಮಾಲೋಚಕರಾದ ಮಹಬೂಬ್ ಭಾಷಾ, ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















