ಸಮಾಜದ ನೈರ್ಮಲ್ಯವನ್ನು ಕಾಪಾಡಲು ನಿರಂತರವಾಗಿ ಶ್ರಮಿಸುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ – ಭಾರತಿ ದಂಡೋತಿ.
ಗುರುಮಠಕಲ್: ಸೆ. 23 ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬಿ ಬಸಲಿಂಗಪ್ಪ ಮಾಜಿ ಪೌರಕಾರ್ಮಿಕ ಸಚಿವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರೆರಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೋತಿ ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರ ಪಾತ್ರ ಬಹು ಮುಖ್ಯವಾಗಿದೆ, ನಮ್ಮ ಸಮಾಜದಲ್ಲಿ ವೈಯಕ್ತಿಕ ಘನತೆಯಿಂದ ಅಪಾರವಾಗಿ ವಂಚಿತಗೊಂಡಿರುವ ಒಂದು ಸಮೂಹ ಪೌರ ಕಾರ್ಮಿಕರದ್ದು. ಪಟ್ಟಣವನ್ನು ಶುಚಿಗೊಳಿಸುವ ಮೂಲಕ ಇಡೀ ಸಮಾಜವನ್ನು ಆರೋಗ್ಯವಾಗಿ ಇಡುವುದಕ್ಕೆ ಪ್ರತ್ಯಕ್ಷ ಕಾರಣಕರ್ತರು ಪೌರ ಕಾರ್ಮಿಕರು ಎಂದು ಹೇಳಿದರು.
ಸಂತೋಷ ನೀರೆಟಿ ಪೌರ ಕಾರ್ಮಿಕರ ಕಾರ್ಯ ಕುರಿತಾಗಿ ಸ್ವ ರಚಿತ ಕನ್ನಡ ತೆಲುಗು ಮಿಶ್ರಿತ ಕವನ ಹಾಡಿ ಪೌರ ಕಾರ್ಮಿಕರ ಮೆಚ್ಚುಗೆಗೆ ಪಾತ್ರರಾದರು.
ಪುರಸಭೆ ಕಾರ್ಯಾಲಯದ ಒಟ್ಟು 44 ಜನ ಪೌರಕಾರ್ಮಿಕರಿಗೆ ಪುರಸಭೆ ವತಿಯಿಂದ ಸನ್ಮಾನಿಸಿ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಪೊಲೀಸ್ ಪಾಟೀಲ, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಪುರಸಭೆ ಸದಸ್ಯರು, ನಾಮ ನಿರ್ದೇಶಕ ಸದಸ್ಯರು, ಪುರಸಭೆ ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















