ಗದಗ :ಇಂದು ಲಕ್ಷ್ಮೇಶ್ವರ ತಾಲೂಕಾ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಾಲಯದಲ್ಲಿ ತಾಲೂಕಾ ಅಧ್ಯಕ್ಷರಾದ ಶ್ರೀ ಮಂಜುನಾಥ ಮಾಗಡಿ ಇವರ ಅಧ್ಯಕ್ಷತೆಯಲ್ಲಿ ಪಂಚಮಸಾಲಿ ಸಂಘದ ತಾಲೂಕ ಕಮೀಟಿ ಸದಸ್ಯರು, ಗ್ರಾಮ ಘಟಕಗಳ ಅಧ್ಯಕ್ಷರುಗಳು ಹಾಗೂ ಹಿರಿಯರೊಂದಿಗೆ ಸಭೆ ಸೇರಿ,
ದಿ. 22/09/2025 ರಿಂದ ದಿ. 07/10/2025 ರ ವರೆಗೆ ನಡೆಯುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ರಲ್ಲಿ ಸಮಾಜ ಬಾಂಧವರು ಧರ್ಮದ ಕಾಲಂ ನಲ್ಲಿ “ಹಿಂದೂ”ಎಂದು ಮತ್ತು ಜಾತಿಯ ಕಾಲಂ ನಲ್ಲಿ “ಲಿಂಗಾಯತ ಪಂಚಮಸಾಲಿ”ಎಂದು ಕ್ರಮ ಸಂಖ್ಯೆ A -0868 ನ್ನು ಕಡ್ಡಾಯವಾಗಿ ಬರೆಸಬೇಕೆಂದು ವಿನಂತಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಇದೇ ಸಮಯದಲ್ಲಿ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಲಕ್ಷ್ಮೇಶ್ವರ ತಾಲೂಕಿನ 30 ಗ್ರಾಮಗಳಿಗೆ ಮತ್ತು ಲಕ್ಷ್ಮೇಶ್ವರ ನಗರದ 23 ವಾರ್ಡಗಳಿಗೆ ಭಿತ್ತಿಪತ್ರಗಳನ್ನು ಪಂಚಮಸಾಲಿ ಸಮಾಜದವರ ಮನೆ ಬಾಗಿಲುಗಳಿಗೆ ಅಂಟಿಸಿ ಜಾಗೃತಿ ಮೂಡಿಸುವಂತೆ ಹೇಳಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ದೇವಣ್ಣ ಬಳಿಗಾರ, ಶ್ರೀ ಚಂಬಣ್ಣ ಬಾಳಿಕಾಯಿ, ಶ್ರೀ ಚನ್ನಪ್ಪ ಕರೆಯತ್ತಿನ, ಶ್ರೀ ನೀಲಪ್ಪ ಕರ್ಜಕಣ್ಣವರ, ಶ್ರೀ ಬಸವರಾಜ ಉಮಚಗಿ, ಶ್ರೀ ಮುದ್ದಣ್ಣ ಸಾಲ್ಮನಿ, ಶ್ರೀ ವೀರೇಂದ್ರಕುಮಾರ ಕಟಗಿ, ಶ್ರೀ ಫಕ್ಕೀರೇಶ ಕವಲೂರ, ಮಲ್ಲನಗೌಡ ಪಾಟೀಲ, ಮಂಜುನಾಥ ಗೌರಿ, ಮಲ್ಲಿಕಾರ್ಜುನ ನಿರಾಲೂಟಿ, ಶಿವಾನಂದ ಬಣ್ಣಿಮಟ್ಟಿ, ಜುಂಜನಗೌಡ ನರಸಮ್ಮನವರ, ಮಂಜನಗೌಡ್ರ ಕರಿಗೌಡ್ರ, ಮಂಜುನಾಥ ಹಂಗಣಕಟ್ಟಿ, ಬಸವರಾಜ ಬಳ್ಳೊಳ್ಳಿ, ಭೀಮಣ್ಣ ಹುಲ್ಲೂರ, ಚಂದ್ರು ಮಾಗಡಿ ಹಾಗೂ ಮಾಂತು ಉಮಚಗಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ ಸತೀಶ್ ಗೋಡಿ



















