ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ಮಹಾಸಿದ್ದೇಶ್ವರ ಜಾತ್ರೆ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಮಹಾಸಿದ್ದೇಶ್ವರ ದೇವರ ಜಾತ್ರೆಯು ಅಕ್ಟೋಬರ್ 1 ಹಾಗೂ 2 ಎರಡರಂದು ವಿಜೃಂಭಣೆಯಿಂದ ಜರುಗಲಿದೆ. ಬುಧವಾರ ದಿ 1 ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜಾ, ಸಮಸ್ತ ಭಕ್ತರಿಗೆ ಪ್ರಸಾದ ಜರುಗುವುದು. ನಂತರ ವಿಶೇಷ ಆಕರ್ಷಕ ಬಹುಮಾನಗಳನ್ನು ಹೊಂದಿದ ಮುಕ್ತ ವ್ಹಾಲಿಬಾಲ ಪಂದ್ಯ‌ ಜರುಗುವದು.
ರಾತ್ರಿ 10ಗಂಟೆಗೆ ಬಬಲೇಶ್ವರ ತಾಲೂಕಿನ ಹೊಳೆಅಂಗರಗಿಯ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಮುಗಳಖೋಡದ ಮಹಾ ಸಿದ್ದೇಶ್ವರ ಗಾಯನ ಸಂಘದವರಿಂದ ಡೊಳ್ಳಿನ ಪದಗಳು.
ಗುರುವಾರ ದಿ.2ರಂದು ಮುಂಜಾನೆ ಪೂಜಾ ಹಾಗೂ ಶುಭನುಡಿಗಳಾಗುವವು. ನಂತರ 350 ಕೆ.ಜಿ. ಮನುಷ್ಯರು ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ,
ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುವುದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ “ಹಳ್ಳಿಯಿಂದ ದಿಲ್ಲಿಯ ವರೆಗೆ” ನಾಟಕ ಪ್ರದರ್ಶನಗೊಳ್ಳುವರೊಂದಿಗೆ ಜಾತ್ರೆ ಸಂಪನ್ನ ಗೊಳ್ಳುವದು ಎಂದು ಗ್ರಾ.ಪಂ. ಸದಸ್ಯರಾದ ಪಿ .ಬಿ. ಸುಣಗಾರ ಹಾಗೂ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!