ಬಳ್ಳಾರಿ : ಕರ್ನಾಟಕ ಸರ್ಕಾರದ ಭಾಗವಾದ ಔಷಧ ನಿಯಂತ್ರಣ ಇಲಾಖೆಯು ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಗ್ರಾಮದ ಶ್ರೀ ಶರಣಬಸವೇಶ್ವರ ಕೃಪ ಮೆಡಿಕಲ್ಸ್ ನ ಮಾಲಿಕರಾದ ಗೋಸ್ಬಾಲ್ ಮಲ್ಲಿಕಾರ್ಜುನ ವಡ್ಡು ರವರಿಗೆ ಬೆಸ್ಟ್ ಫಾರ್ಮಸಿಸ್ಟ್ 2025 ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿಲ್ಲಾ ಎಡಿಸಿ ಸಿ. ಮಂಜುಳಾ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಆನ್ಲೈನ್ ಮೂಲಕ ಔಷಧಿಗಳು ದೊರೆಯುತ್ತಿವೆ ಆದರೆ ಔಷಧ ತಜ್ಞರಾದವರು ತಮ್ಮ ಅಂಗಡಿಯಲ್ಲಿ ಕುಳಿತು ಕೇವಲ ವ್ಯಾಪಾರ ಲಾಭವನ್ನು ಮಾತ್ರ ಗಮನದಲ್ಲಿರಿಸಿಕೊಳ್ಳದೆ ನಿಸ್ವಾರ್ಥ ಸೇವೆಯಿಂದ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿದರೆ ನಮಗೆ ಯಾರು ಸ್ಪರ್ಧೆ ನೀಡಲಾಗುವುದಿಲ್ಲ ಜನರ ವಿಶ್ವಾಸಾರ್ಹತೆಗೆ ಕುಂದುಬಾರದಂತೆ ನಾವು ನಡೆದುಕೊಳ್ಳಬೇಕಿದೆ ನಮ್ಮನ್ನು ನಂಬಿ ಬರುವ ಗ್ರಾಹಕರು ನಮ್ಮ ಕುಟುಂಬದವರೆಂದು ಭಾವಿಸಿ ಔಷಧವನ್ನು ನೀಡಬೇಕಿದೆ ಕಂಪನಿಗಳು ಬಂದರೂ ನಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ.
ನಮ್ಮಲ್ಲಿ ನಂಬಿ ಬರುವ ಗ್ರಾಹಕರು ನಮ್ಮ ಕುಟುಂಬದವರೆಂದು ಭಾವಿಸಿ ಔಷಧವನ್ನು ನೀಡಬೇಕಿದೆ ಆಗ ನಾವು ಎಷ್ಟೇ ಬಹುರಾಷ್ಟ್ರೀಯ ಕಂಪನಿಗಳು ಬಂದರೂ ನಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಬಂದಾಗ ನಮ್ಮ ವ್ಯಾಪಾರಕ್ಕೆ ಸ್ವಲ್ಪ ಕಷ್ಟವಾಗಬಹುದು ಅದು ನಮ್ಮನ್ನು ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಜಿಲ್ಲಾ ಫಾರ್ಮಾಸಿಸ್ಟ್ ಅಧ್ಯಕ್ಷರಾದ ಬಿ. ಕೆ. ಪ್ರಸನ್ನ ಕುಮಾರ ಪದಾಧಿಕಾರಿಗಳು ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕಿನ ಮೆಡಿಕಲ್ಸ್ ನ ಮಾಲೀಕರು, ಔಷಧ ತಜ್ಞರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















