ವ್ಯವಸ್ಥೆಯ ಬದಲಾವಣೆ
ನಿನ್ನೊಬ್ಬನಿಂದಲೇ ಸಾಧ್ಯ,
ಎಂದು ನೀನೇನಾದರೂ
ತಿಳಿದುಕೊಂಡಿದ್ದರೆ, ಅದು
ನಿನ್ನ ಮೂರ್ಖತನವಯ್ಯ,
ಎಲ್ಲರೂ ಆತ್ಮಾವಲೋಕನ
ಮಾಡಿಕೊಂಡರೆ ಸಾಕಯ್ಯ,
ಈ ಅರಿವು ಸದಾ ಇರಲೆಂದ ಶಿವ ಶಿವಾ!
ಪ್ರಾಣಿಗಳ ಹಿಂಸಿಸಿ
ಪ್ರಾಣಾಯಾಮವ
ಮಾಡಿದರೇನು?
ಪ್ರಯೋಜನವಯ್ಯ,
ಒಲ್ಲದ ದೇವರುಗಳಿಗೆ
ಕುರಿ, ಕೋಳಿ, ಕೋಣಗಳ
ಬಲಿ ಕೊಡುವ ಮನುಜ
ಪ್ರಾಣಿಗಳ ಏನೆಂಬೆ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ ✍️.




















