ಬಳ್ಳಾರಿ / ಕಂಪ್ಲಿ : ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಸುಮಾರು 19 ಇಲಾಖೆಯ ಹೊರ ಗುತ್ತಿಗೆ ನೌಕರರ ಸಮಸ್ಯೆಗಳನ್ನು ಆಲಿಸಿ, ಹೋರಾಟದ ಮೂಲಕ ಸಮಸ್ಯೆಗಳಿಗೆ ಇತಿ ಶ್ರೀ ಹಾಡಲಾಗುವುದು ಎಂದು ಸರ್ಕಾರಿ ಹೊರ ಗುತ್ತಿಗೆ ನೌಕರರ ಕಂಪ್ಲಿ ತಾಲೂಕಾಧ್ಯಕ್ಷ ಡಿ. ಆರ್. ಪಾಂಡುರಂಗ ಹೇಳಿದರು.
ಪಟ್ಟಣದ ಕೊಟ್ಟಾಲ್ ರಸ್ತೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ತೆರಳುವ ಬಳಿಯಲ್ಲಿರುವ ಸಾಯಿಬಾಬಾ ಉದ್ಯಾನವನದಲ್ಲಿ ಹೊರ ಗುತ್ತಿಗೆ ನೌಕರರಿಂದ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ನೌಕರರ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ. ಇದರಿಂದ ಎಲ್ಲಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಗಣಿಸಿ, ಹಂತ ಹಂತದಲ್ಲಿ ಹೋರಾಟದ ಮೂಲಕ ಸಮಸ್ಯೆಗಳನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯದರ್ಶಿ ಕಚ್ಚಿ ಮಾಳಪ್ಪ, ಉಪಾಧ್ಯಕ್ಷ ಹೆಚ್. ಜಡೇಮೂರ್ತಿ, ನೌಕರರಾದ ಕೆ.ಗೋವಿಂದಪ್ಪ, ಎನ್.ಜಡೆಪ್ಪ, ವೈ.ಉಮೇಶ, ಎಸ್.ಮಂಜುನಾಥ, ಪಾಮಪ್ಪ, ಸಿ.ಡಿ.ಪಾಂಡುರಂಗ, ಎಸ್.ಮಹಾಂತೇಶ, ವೈ.ಈರಣ್ಣ, ಸುಂದರರಾಜು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















