ಕೊಪ್ಪಳ :ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೆಯ ಹಂತದ ಪಾದಯಾತ್ರೆಯ ಸಭೆಯು ಶ್ರೀರಾಮ ನಗರದ ಶ್ರೀ ಕನಕದುರ್ಗಾ ದೇವಸ್ಥಾನದಲ್ಲಿ ಜರುಗಿತು.
ಸಭೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ವೀರಾಪುರ
ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಜೀವನಾಡಿ ಯಾದ ತುಂಗಭದ್ರೆಯ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.
ನದಿಗಳು ಸ್ವಚ್ಚವಾಗಿದ್ದರೆ ಮುಂದಿನ ಪಿಳಿಗೆಗೆ ಶುದ್ದ ನೀರು ದೊರಕಲಿದೆ ಇಲ್ಲವಾದರೆ ಕಲುಷಿತ ನೀರು ಪೋರೈಕೆಯಿಂದ ಅನೇಕ ರೋಗಗಳು ಹರಡುತ್ತವೆ. ಈಗಲೇ ನಾವು ನೀವುಗಳೆಲ್ಲಾ ಎಚ್ಚೆತ್ತಕೊಳ್ಳಬೇಕಾಗಿದೆ ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕರಾದ ಶ್ರೀ ಮಹಿಮಾ ಪಟೇಲ್,
ನಿರ್ಮಲ ತುಂಗಭದ್ರಾ ಅಭಿಯಾನದ ದಕ್ಷಿಣ ಭಾರತದ ಸಂಚಾಲಕರಾದ ಮಾಧವನ್ , ಕೊಪ್ಪಳ ಜಿಲ್ಲಾ ಸಂಚಾಲಕರಾದ ಡಾಕ್ಟರ್ ಶಿವಕುಮಾರ್ ಮಾಲಿಪಾಟೀಲ್ ,Ch ವೆಂಕಟ ರಾಮಕೃಷ್ಣ,ಕರಟೂರಿ ವೆಂಕಟರಾವು, ರಫಿ,ಸತ್ಯನಾರಾಯಣ ದೇಶಪಾಂಡೆ, ಗ್ರಾ.ಪಂ.ಸದಸ್ಯರಾದ ಪಿ.ರಾಮಕೃಷ್ಣ (ಬುಲ್ಲಿಕಾಪು) ರಾಮಕೃಷ್ಣ ರಾಜು,ಮೆಹಬೂಬ್, P. ವೆಂಕಟೇಶ್ವರ ರಾವು, ಶ್ರೀಮತಿ ಝಾನ್ಸಿ, ಶ್ರೀಮತಿ ಸುಮಂಗಲ,ಬಸಪ್ಪ, ಅನ್ನೆ ಶೇಖರ್, ಕರಟೂರಿ ನಾಗೇಶ್, ಪಿ.ಶ್ರೀನಿವಾಸ್, ರಾಘವೇಂದ್ರ ತೂನ, ವಿಷ್ಣುತೀರ್ಥ , ಪವನ್ ಕುಮಾರ್ ಗುಂಡೂರ್ ,ಬಸವರಾಜ ,ಗೂಡಪಾಶ ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ



















