ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಅದ್ಧೂರಿಯಾಗಿ ನಡೆದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ತಾಲೂಕು ವತಿಯಿಂದ ಆಯೋಜಿಸಿದ್ದ ಭಾವಚಿತ್ರ ಬೃಹತ್ ಮೆರವಣಿಗೆ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ಇಲ್ಲಿನ ಉದ್ಭವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಭವ್ಯ ಮೆರವಣಿಗೆ ಶಾಸಕ ಜೆ.ಎನ್.ಗಣೇಶ ಚಾಲನೆ ನೀಡುವ ಮೂಲಕ ಆರಂಭಗೊಂಡಿತು. ಇಲ್ಲಿನ ನಡುವ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಮಾರೆಮ್ಮ ದೇವಸ್ಥಾನ, ಡಾ.ಬಿ.ಆರ್. ಅಂಬೇಡ್ಕ‌ರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಕೊಟ್ಟಾಲ್ ರಸ್ತೆ ಮಾರ್ಗವಾಗಿ ವಾಲ್ಮೀಕಿ ಸಮುದಾಯ ಭವನ ತಲುಪಿತು. ಮಾರ್ಗದುದ್ದಕ್ಕೂ ಡೊಳ್ಳು ಕುಣಿತ, ಧ್ವನಿ ವರ್ಧಕ, ತಾಷಾರಾಂಡೋಲ್ ಸೇರಿದಂತೆ ವಿವಿಧ ವಾದ್ಯಮೇಳ ಹಾಗೂ ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದರು. ಸೋಮಲಾಪುರದ ಹಗಲುವೇಷಧಾರಿಗಳ ತಂಡ ಮೆರವಣಿಗೆ ಮೆರಗು ನೀಡಿದರು. ವಾಲ್ಮೀಕಿ ಸಮುದಾಯದವರು ಬಾವುಟ ಹಿಡಿದು ರಾರಾಜಿಸಿದರು. ಜೈ ವಾಲ್ಮೀಕಿ ಜೈಜೈ ವಾಲ್ಮೀಕಿ ಎಂಬ ಘೋಷ ವಾಕ್ಯದೊಂದಿಗೆ ನೂರಾರು ಯುವಕರು ಗಮನ ಸೆಳೆದರು. ತಹಶೀಲ್ದಾರ್ ಮಂಜುನಾಯಕ ಇವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತದ ನಂತರ ಸಮುದಾಯ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ತಾಲೂಕು ಅಧ್ಯಕ್ಷ ಜವುಕು ವಿರೇಶ, ಉಪಾಧ್ಯಕ್ಷ ಡಿ.ವೀರಣ್ಣ, ಬಿ.ವೆಂಕಟೇಶ, ಪುರಸಭೆ ಸದಸ್ಯರಾದ ಎನ್.ರಾಮಾಂಜಿನೇಯಲು, ಹೇಮಾವತಿ ಪೂರ್ಣಚಂದ್ರ, ಪಾರ್ವತಿ, ತಿಮ್ಮಕ್ಕ, ಮುಖಂಡರಾದ ಬಿ.ನಾರಾಯಣಪ್ಪ, ಡಾ.ವೆಂಕಟೇಶ ಸಿ.ಭರಮಕ್ಕನವರ್, ಬಿ.ಬಸವರಾಜ, ದೊಡ್ಡಬಸಪ್ಪ, ಬಿ.ಬಸಪ್ಪ, ಅಂಬಣ್ಣ, ಹಾಲುಮಾರೋ ಈರಣ್ಣ, ಬಾಳೆಕಾಯಿ ಹುಲುಗಪ್ಪ, ದುರುಗಪ್ಪ, ದೇವಸಮುದ್ರ ಯಂಕೋಬಣ್ಣ, ಪೈಲ್ವಾನ್ ವಿರೇಶ, ನಾಗಭೂಷಣ, ಸುಗ್ಗೇನಹಳ್ಳಿ ಜಡೆಪ್ಪ, ಹೊನ್ನಳ್ಳಿ ದೇವಣ್ಣ, ಕೊಟ್ಟಾಲ್ ವಿರೇಶ, ಜಾನೂರು ಗೋವಿಂದಪ್ಪ, ಮಹಾಂತೇಶ, ನಾಗರಾಜ, ರಾಘವೇಂದ್ರ ನಾಯಕ, ಫ್ಯಾಕ್ಟರಿ ಶೇಖರ, ಪಿ.ವಿರೇಶ, ದೇವರಾಜ, ವಾಸು ಸೇರಿದಂತೆ ಮಹಿಳೆಯರು, ಮಕ್ಕಳು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!