ಬಳ್ಳಾರಿ/ ಕಂಪ್ಲಿ : ಕಳೆದ ದಶಕದ ಇತಿಹಾಸವನ್ನು ಹೊಂದಿರುವ ಕಂಪ್ಲಿ ತಾಲ್ಲೂಕು ಅಕ್ಕಿ ವ್ಯಾಪಾರಸ್ಥರ ಸಂಘಕ್ಕೆ ಪಟ್ಟಣದ ಎಪಿಎಂಸಿಯಲ್ಲಿ ಬುಧವಾರ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಳೆದ ವಾರ ನಡೆದ ತಾಲ್ಲೂಕಿನ ಎಲ್ಲಾ ಅಕ್ಕಿ ವ್ಯಾಪಾರಸ್ಥರ ಸದಸ್ಯರ ಮಹಾಜನ ಸಭೆಯಲ್ಲಿ ಸಂಘಕ್ಕೆ 9 ಜನ ನೂತನ ನಿರ್ದೇಶಕರಗಳನ್ನು ಆಯ್ಕೆ ಮಾಡಲಾಗಿತ್ತು. ಈಗ ನೂತನ ನಿರ್ದೇಶಕರುಗಳು ಸಭೆ ಸೇರಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಟಿ. ಬದ್ರಿನಾಥ್ ಶ್ರೇಷ್ಠಿ, ಉಪಾಧ್ಯಕ್ಷರಾಗಿ ಸಣಾಪುರದ ಜಿ.ಕುಮಾರಸ್ವಾಮಿ, ಕಾರ್ಯದರ್ಶಿಯಾಗಿ ಬಿ.ಶೇಕ್ಷಾವಲಿ, ಖಜಾಂಚಿಯಾಗಿ ಕೆ.ಯಮನೂರಪ್ಪ, ಸಂಚಾಲಕರಾಗಿ ಅಗಳಿ ಪಂಪಾಪತಿ, ನಿರ್ದೇಶಕರಾಗಿ ಎಂ.ಬ್ರಹ್ಮಯ್ಯ ಬಾಬು, ವಿ.ರಾಮಲಿಂಗಯ್ಯ, ಜಿ.ಯಲ್ಲಪ್ಪ, ವಿ.ಬಸವರಾಜ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನೂತನ ಅಧ್ಯಕ್ಷ ಟಿ.ಬದ್ರಿನಾಥ್ ಶ್ರೇಷ್ಠಿ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ತಾಲ್ಲೂಕು ಅಕ್ಕಿ ವ್ಯಾಪಾರಸ್ಥರ ಸಂಘವು ಕಾರ್ಯ ನಿರ್ವಹಿಸುತ್ತಿದ್ದು, ಸಂಘದಲ್ಲಿ 140 ಜನ ವ್ಯಾಪಾರಸ್ಥ ಸದಸ್ಯರಿದ್ದು, ಸಂಘದ ಸದಸ್ಯರ ಹಿತರಕ್ಷಣೆಗಾಗಿ ಸಂಘವು ಕಾರ್ಯನಿರ್ವಹಿಸಲಿದೆ. ಜೊತೆಗೆ ರೈತರ ಹಾಗೂ ವ್ಯಾಪಾರಸ್ಥರ ನಡುವೆ ಸೇತುವೆಯಾಗಿ ಸಂಘವು ಕಾರ್ಯನಿರ್ವಹಿಸಲಿದ್ದು, ಸಂಘದ ಸದಸ್ಯರು ಹಾಗೂ ರಯತರು, ಅಕ್ಕಿ ಗಿರಣಿಗಳ ಮಾಲೀಕರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















