ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಲಕಿಯ ಬರ್ಬರ ಕೊಲೆ ಖಂಡನೀಯ

ಕಲಬುರಗಿ: ಮೈಸೂರಿನಲ್ಲಿ ಭಯಾನಕ ಸ್ಥಿತಿಯಲ್ಲಿ ಬಾಲಕಿ ದೌರ್ಜನ್ಯಕ್ಕೆ ಒಳಗಾಗಿ ಬರ್ಬರ ಕೊಲೆಯಾಗಿರುವ ಘಟನೆ ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ಹಾಗೂ ಕಾರ್ಯದರ್ಶಿ ಶಾಂತಾ ಸರಡಗಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಾಡಹಬ್ಬ ದಸರೆಯ ಸಡಗರ ಮರೆಯುವ ಮುನ್ನವೇ ಒಂದರ ಮೇಲೊಂದು ಕೊಲೆ, ಅತ್ಯಾಚಾರದ ಘಟನೆಗಳ ಸುದ್ದಿ ಕೇಳಿ ಜನರು ಬೆಚ್ಚಿ ಬೀಳುವ ಆತಂಕಕಾರಿ ಬೆಳವಣಿಗೆ ಸೃಷ್ಟಿಯಾಗಿದೆ. ಶಾಂತಿ, ಸುವ್ಯವಸ್ಥೆಯ ಸುರಕ್ಷಿತ ನಗರವೆಂದು ಖ್ಯಾತಿ ಪಡೆದಿದ್ದ ಮೈಸೂರು ನಗರದ ಒಡಲಲ್ಲಿ ಇತ್ತೀಚೆಗೆ ಡ್ರಗ್ಸ್ ಫ್ಯಾಕ್ಟರಿ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಆಘಾತಕಾರಿ ಸುದ್ದಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆ ನಂತರ ಒಂದರ ಮೇಲೊಂದರಂತೆ ಕೊಲೆ ಸುಲಿಗೆಯ ವರದಿಗಳು ಪ್ರಕಟವಾಗುತ್ತಿವೆ. ಮೊನ್ನೆಯಷ್ಟೇ ವಸ್ತು ಪ್ರದರ್ಶನ ಮೈದಾನದ ಬಳಿ ಯುವಕನೊಬ್ಬನ ಕೊಲೆಯಾದ ಸ್ಥಳದಲ್ಲೇ 10 ವರ್ಷದ ಹೆಣ್ಣು ಮಗು ಕೊಲೆಗೈದ ಘಟನೆ ಅತ್ಯಂತ ಹೇಯ ಹಾಗೂ ಮಾನವೀಯ ಹೃದಯವನ್ನು ಕಲಕುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮುಗ್ಧ ಬಾಲೆಯ ಮೇಲೆ ಈ ರಾಕ್ಷಸಿ ಕೃತ್ಯ ವೆಸಗಿದ ಪಾತಕಿಗಳನ್ನು ಪತ್ತೆ ಹುಚ್ಚುವ ನಿಟ್ಟಿನಲ್ಲಿ ದುರುಳನೊಬ್ಬನ ಬಂಧನ ಹಾಗೂ ಆತನ ಮೇಲೆ ಗುಂಡು ಹಾರಿಸಿರುವ ಪೊಲೀಸರ ಕ್ರಮ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಾಲಕಿ ಮೇಲಿನ ಕ್ರೌರ್ಯಕ್ಕೆ ಬೆಚ್ಚಿಬಿದ್ದಿರುವ ಜನರು ಹಾಗೂ ಸಂಘ ಸಂಸ್ಥೆಗಳ ಆಕ್ರೋಶ ತಣ್ಣಗಾಗಿಸಲು ಪೊಲೀಸರು ಪ್ರಕರಣ ತಣ್ಣಗಾಗಿಸಲು ಕಥೆ ಹೆಣೆಯುತ್ತಿದ್ದಾರೆ ಎಂಬ ಮಾತು ಜನ ವಲಯದಲ್ಲಿ ಕೇಳಿಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!