ಕಲ್ಬುರ್ಗಿ: ಕಲ್ಬುರ್ಗಿಗೆ 1000. ಕೋಟಿ ಪರಿಹಾರ ಕೊಡಿ ಎಂದ ವೀರಣ್ಣಗಂಗಾಣಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಿಸಬೇಕೆಂದು ಆಗ್ರಹಿಸಿ ಅ.13ರಂದು ಕಲಬುರಗಿ ಬಂದ್‌ಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ ಪಾಟೀಲ್ ಗೊಣಗಿ, ಜಿಲ್ಲಾಪ್ರಧಾನ ಕಾರ್ಯದರ್ಶಿಗಳು, ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ಘಟಕ ಮಾತನಾಡಿ ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 13ರಂದು ಬಂದ್‌ಗೆ ಕರೆ ನೀಡಲಾಗಿದೆ. ಅಂದು ಕಲಬುರಗಿ ನಗರದ ಪ್ರಮುಖ ರಸ್ತೆಗಳಾದ ಆಳಂದ ಚೆಕ್ ಪೋಸ್ಟ್, ರಾಮಮಂದಿರ ಸರ್ಕಲ್, ಸೇಡಂ ಹಾಗೂ ಹುಮನಾಬಾದ ರಿಂಗ್ ರೋಡ್, ಹೀರಾಪುರ ಕ್ರಾಸ್, ಕೋರ್ಟ್ ರಸ್ತೆ ಹಾಗೂ ಶಹಾಬಾದ ರಿಂಗ್ ರೋಡ್‌ಗಳಲ್ಲಿ ಎತ್ತಿನಗಾಡಿ ಹಾಗೂ ಟ್ರಾಕ್ಟರ್‌ಗಳೊಂದಿಗೆ ರೈತರಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು’ ಎಂದು ತಿಳಿಸಿದರು.
‘ರೈತ, ದಲಿತ, ಕನ್ನಡ ಪರ, ಮಹಿಳಾ ಪರ ಸಂಘಟನೆಗಳು, ಕೆಎಸ್‌ಆರ್‌ಟಿಸಿ ಸಾರಿಗೆ ಸಂಘ, ಬೀದಿ ಬದಿ ವ್ಯಾಪಾರಸ್ಥರು, ಅಡತ ಬಜಾರ, ಲಾರಿ ಮಾಲೀಕರ ಸಂಘ, ಪೆಟ್ರೋಲ್ ಬಂಕ್, ಆಟೋ ಚಾಲಕರ ಸಂಘಗಳು ಬಂದ್ ಕರೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ರೈತ ಮುಖಂಡ ವೀರಣ್ಣ ಗಂಗಾಣಿ, ಭೀಮರಾವ ಮಲಗಾಣ, ಸಿದ್ದರಾಮಪ್ಪ ಪಾಟೀಲ್, ಸುಂದರ ಸಾಗರ, ಪೃಥ್ವಿರಾಜ ಮಲಗಾಣ, ಮೋಹನ ಚಿನ್ನ, ಮಲ್ಲಿಕಾರ್ಜುನ ರದನೂರು, ರೇವಣಸಿದ್ದಪ್ಪ ಮೋಟಪ್ಪಳ್ಳಿ, ಮಲ್ಲು ಪಾಟೀಲ್ ಹೊಳಗೇರಾ , ಗೌರಿಶಂಕರ ನಾವದಗಿ, ಸಿದ್ದಯ್ಯ ಸ್ವಾಮಿ ಮುಕ್ರಂಬಿ, ಜಗನ್ನಾಥ ಅಲ್ಬ, ಶಾಂತಪ್ಪ ನಾಗೂರ ರೇವಗಿ, ರಮೇಶ ಹೆಬ್ಬಾಳ,ಸಿದ್ದು ಚಟ್ನಳ್ಳಿ, ಪ್ರದೀಪ್ ಪಾಟೀಲ್, ಮಸಾಕ ಪಟೇಲ್,ಕಾಶೀನಾಥ ಗೋಗಿ, ಮಲ್ಲು ಹೂಗಾರ, ಚಂದ್ರಕಾಂತ ಕಲಶೆಟ್ಟಿ, ಸಿದ್ದಯ್ಯ ಸ್ವಾಮಿ ರೇವಗಿ, ಸಂಜು ರೆಡ್ಡಿ ರೂಮನಗೂಡು, ದೇವಪ್ಪ ಪೂಜಾರಿ ಹೊಳಗೇರಾ, ಬಸವರಾಜ ಚಟ್ನಳ್ಳಿ, ಬಾಬುಸಾಬ ಮುಲ್ಲಾ, ಗುಂಡಯ್ಯ , ರೇವಪ್ಪ ಬಸವಣ್ಣೋರ , ರೇವಣಸಿದ್ಧ ಮಳಖೇಡ, ರಾಜು ಹಂದ್ರಳ್ಳಿರಟಕಲ್ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ: ವಿ. ಎಸ್. ಗಂಗಾಣಿ.



















