
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಶ್ರೀ ಜಗನ್ನಾಥ ಸಿಗಿ ರಟಕಲ್, ಸರ್ವೇ ನಂಬರ್ 548, 549 ರಲ್ಲಿ ಸುಮಾರು 9 ಎಕರೆ 26 ಗುಂಟೆ ಕಬ್ಬು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟಿದ್ದು ಕೆಇಬಿ ರವರ ನಿರ್ಲಕ್ಷ್ಯದ ಕಾರಣ ಜೋತು ಬಿದ್ದ ವೈರುಗಳಿಂದ ಕಬ್ಬು ಸುಟ್ಟಿದೆ ಈ ಬಗ್ಗೆ ಎಷ್ಟೋ ಬಾರಿ ಕೆಇಬಿಗೆ ಹೋಗಿ ಹೇಳಿದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದ ಕಾರಣ ಕಬ್ಬು ನಾಶವಾಗಿದೆ.
ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಚಿಂಚೋಳಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಕಬ್ಬಿನ ಹೊಲಕ್ಕೆ ಬಂದ ಕೆಇಬಿ ರಟಕಲ್ ಅಧಿಕಾರಿಗಳು ಸಾಹೇಬಗೌಡ ಎಸ್ಓ, ಪವರ್ ಮ್ಯಾನ್ ರಮೇಶ, ಹಾಗೂ ಪಿಎಸ್ಐ ಶೀಲಾದೇವಿ ಆರಕ್ಷಕ ಠಾಣೆ ರಟಕಲ್ ಇವರು ಕಬ್ಬಿನ ಹೊಲಕ್ಕೆ ಬಂದು ಸ್ಥಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಬಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ರೈತ ಮುಖಂಡ ವೀರಣ್ಣ ಗಂಗಾಣಿ ಕೂಡಲೇ ಸುಟ್ಟಿರತಕ್ಕಂತ ಕಬ್ಬಿನ ಹೊಲದ ಮಾಲೀಕನಿಗೆ ಸೂಕ್ತ ಪರಿಹಾರ ಒದಗಿಸಬೇಕು, ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ಆಗದಂತೆ ಎಚ್ಚರ ವಹಿಸಬೇಕು ಇಲ್ಲವಾದರೆ ಕೆಇಬಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ, ತಾಲೂಕಿನಾದ್ಯಂತ ಜೋತು ಬಿದ್ದ ವೈರುಗಳು, ಅಲುಗಾಡುತ್ತಿರುವ, ಬಾಗಿ ನಿಂತ ಕಂಬಗಳು ಇವೆ ಇನ್ನಾದರೂ ಅವುಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಈ ಸಂದರ್ಭದಲ್ಲಿ ಹೊಲದ ಮಾಲೀಕರಾದ ಜಗನ್ನಾಥ ಸಿಗಿ, ರೈತ ಮುಖಂಡ ವೀರಣ್ಣ ಗಂಗಾಣಿ, ಐಮದ ಪಟೇಲ, ಶರಣಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು.
ವರದಿ ಎಸ್. ವಿ. ಗಂಗಾಣಿ



















