ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೀದರ್ | ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮೆಟ್ಟಿಲಾಗೋಣ : ಪ್ರೇಮಸಾಗರ್ ದಾಂಡೆಕರ್

ಬೀದರ್ : ನಗರದ ಮೋಹನ ಮಾರ್ಕೆಟ್‌ ನ ಜ್ಞಾನ ಸೂರ್ಯ ಸ್ಪರ್ಧಾ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾಧಿಕಾರಿ ಪ್ರೇಮಸಾಗರ್ ದಾಂಡೆಕರ್ ಅವರು “ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ನಾವೆಲ್ಲರೂ ಮೆಟ್ಟಿಲಾಗೋಣ” ಎಂದು ಹೇಳಿದರು.

ಅವರು ಮಾತನಾಡುತ್ತಾ, “ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಇದೆ, ಶ್ರಮಶೀಲ ಮನಸ್ಸು ಇದೆ, ಆದರೆ ಏನನ್ನು ಓದಬೇಕು, ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬ ಗೊಂದಲ ಮಾತ್ರ ಅವರನ್ನು ಹಿಂದೆ ತಳ್ಳುತ್ತಿದೆ. ಈ ತರಬೇತಿ ಕೇಂದ್ರವು ಆ ಗೊಂದಲವನ್ನು ನಿವಾರಿಸಿ, ವಿದ್ಯಾರ್ಥಿಗಳಿಗೆ ದಿಕ್ಕು ತೋರಿಸುವ ದೀಪವಾಗಬೇಕು” ಎಂದರು.

ಅವರು ಮುಂದುವರಿಸಿ, “ವಿದ್ಯಾರ್ಥಿಗಳು ತಮ್ಮ ಕನಸನ್ನು ಸೀಮಿತ ಗಡಿ ಒಳಗೆ ನಿಲ್ಲಿಸಬಾರದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಧೈರ್ಯ, ಶಿಸ್ತು ಮತ್ತು ನಿರಂತರ ಅಭ್ಯಾಸ ಇವೇ ಯಶಸ್ಸಿನ ತ್ರಿಶೂಲ. ಒಂದು ವಿಫಲತೆಯಿಂದ ಬೆನ್ನು ತಿರುಗಬೇಡಿ; ಅದು ಮುಂದಿನ ಗೆಲುವಿನ ಪಾಠ ” ಎಂದು ವಿದ್ಯಾರ್ಥಿಗಳಿಗೆ ಮನದಾಳದ ಸಂದೇಶ ನೀಡಿದರು.

ವಸತಿ ನಿಲಯದ ವಿದ್ಯಾರ್ಥಿಗಳು ಈ ತರಬೇತಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು. “ಈ ಕೇಂದ್ರ ನಿಮ್ಮ ಭವಿಷ್ಯ ರೂಪಿಸುವ ಪೀಠವಾಗಿದೆ. ಇಲ್ಲಿನ ಪ್ರತಿಯೊಂದು ಕ್ಷಣವನ್ನು ಸಾರ್ಥಕಗೊಳಿಸಿ, ನಿಮ್ಮದೇ ಯಶೋಗಾಥೆ ಬರೆಯಿರಿ,” ಎಂದು ಅವರು ಹೇಳಿದರು.

ಈಗಾಗಲೇ 30 ರಿಂದ 40 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಸಂಪರ್ಕಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಂಸ್ಥೆಯ ನಿರ್ದೆಶಕರು ನೀಡಿದ್ದಾರೆ, “ಈ ತಿಂಗಳ 15ನೇ ತಾರೀಕಿನಿಂದ ತರಗತಿಗಳು ಪ್ರಾರಂಭವಾಗಲಿವೆ. ಇದು ಒಂದು ಹೊಸ ಪ್ರಯಾಣದ ಆರಂಭ — ನಿಮ್ಮ ಆತ್ಮವಿಶ್ವಾಸ, ಪರಿಶ್ರಮ ಮತ್ತು ದೃಢಸಂಕಲ್ಪಗಳ ಪರೀಕ್ಷೆಯ ಸಮಯ” ಎಂದರು.

ನಿವೃತ್ತ ಎಸ್‌ಪಿ ವಿ. ಎಂ. ಜ್ಯೋತಿ ಮಾತನಾಡಿ, “ರಕ್ಷಣಾ ವಲಯ, ಪೊಲೀಸ್ ಇಲಾಖೆ, ಆಡಳಿತ ಸೇವೆ, ಬ್ಯಾಂಕುಗಳು — ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಅವಕಾಶಗಳು ಖಾಲಿ ಇವೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಅದರ ಮಾಹಿತಿ ತಲುಪುವುದಿಲ್ಲ. ಈ ತರಬೇತಿ ಕೇಂದ್ರದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಅವರಿಗೆ ಆ ಹುದ್ದೆಗಳನ್ನು ಗೆಲ್ಲುವ ಉತ್ಸಾಹ ನೀಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಂತೆ ಸಂಘ ರಖಿತಾ ದಿವ್ಯ ಸಾನಿಧ್ಯ ವಹಿಸಿದ್ದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಆರ್. ದೊಡ್ಡೆ, ಶಾಮಸುಂದರ್ ಖಾನಾಪುರಕರ್, ನಿವೃತ್ತ ಡಿವೈಎಸ್ಪಿ ವಿಜಯಕುಮಾರ ಹೊಸಮನಿ, ಕಾಶೀನಾಥ್ ಚಲ್ವಾ, ಸುಭಾಷ್, ಕಲ್ಯಾಣರಾವ ಗದಗ, ಆಶೀಶ್ ಎಸ್, ಪ್ರದೀಪ್ ನಾಟೆಕರ್, ಸಾಗರ್ ಪಡಸಲೆ, ಪ್ರವಿಣ ಮೋಳ್ಕೆರೆ, ಅನಿಲ ಡಿ.ಎಮ್, ಆಕಾಶ ಕಟ್ಟೆ, ಲಕ್ಷ್ಮಣ ಬೆಂದ್ರೆ, ಪರಶುರಾಮ ಶಿಂಧೆ, ಚಂದ್ರಕಾಂತ ಝಬಾಡೆ, ಕಾಳಿದಾಸ, ಉಮೇಶ್, ಕರಣ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

“ಯಶಸ್ಸು ಕೇವಲ ಗುರಿಯ ತಲುಪುವಿಕೆ ಅಲ್ಲ — ಅದು ಪ್ರತಿದಿನವೂ ನಿಮ್ಮ ಶ್ರೇಷ್ಠತೆಯತ್ತದ ಹೆಜ್ಜೆ.
ಈ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ, ಇತರರಿಗಿಂತ ಹೆಚ್ಚು ಬುದ್ಧಿವಂತರಾಗಬೇಕೆಂದಲ್ಲ , ಹೆಚ್ಚು ಶ್ರಮಶೀಲರಾಗಬೇಕು, ಹೆಚ್ಚು ನಂಬಿಕೆಯಿಂದ ಮುಂದೆ ನಡೆಯಬೇಕು.
ಕನಸನ್ನು ದೊಡ್ಡದಾಗಿ ಕಾಣಿ, ಪ್ರಯತ್ನವನ್ನು ಇನ್ನೂ ದೊಡ್ಡದಾಗಿ ಮಾಡಿ.”

  • ನಿವೃತ್ತ ಡಿವೈಎಸ್ಪಿ ವಿಜಯಕುಮಾರ ಹೊಸಮನಿ.
  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!