
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಭಾನುವಾರ ದಿನಾಂಕ, 19.10.2025 ರಂದು, ನವೆಂಬರ್ ಒಂಬತ್ತನೇ ತಾರೀಖಿನಂದು ನಡೆಯಲಿರುವ
ಹನ್ನೊಂದನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ
ಸಭೆ, ಯಶಸ್ವಿಯಾಗಿ ಜರುಗಿತು.

ಆರಂಭದಲ್ಲಿ ಜಿಲ್ಲಾ ಚು. ಸಾ. ಪ. ದ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಹಾದಿಮನಿ, ಸರ್ವರನ್ನೂ ಸ್ವಾಗತಿಸಿ, ಸಭೆಯ ಕಾರ್ಯ, ಚಟುವಟಿಕೆಗಳ ಕುರಿತು, ಪ್ರಾಸ್ತಾವಿಕ ಮಾತುಗಳನ್ನಾಡಿದರು,
ಸಭೆಯಲ್ಲಿ ಕೊಪ್ಪಳ ತಾಲೂಕ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಅಮೀನ್ ಸಾಬ್ ಮುಲ್ಲಾ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಡಾ. ಮಹಾಂತೇಶ ನೆಲಾಗಣಿ,
ಕುಕನೂರು ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತಿನ
ಬಸವರಾಜ ಉಪ್ಪಿನ ಮತ್ತು ಕವಿಗಳಾದ ರವಿ ಎಸ್. ಹಿರೇಮನಿ, ವಸಂತ ಗುಡಿಮನಿ, ನಿವೃತ್ತ ಶಿಕ್ಷಕರಾದ
ಎ. ಪಿ. ಅಂಗಡಿ, ಮೈಲಾರಪ್ಪ ಉಂಕಿ, ಕುಷ್ಟಗಿ ತಾಲೂಕ ಅಧ್ಯಕ್ಷ, ಮಹೇಶ ಹಡಪದ, ಕಾರಟಗಿ ತಾಲೂಕಿನ ಕರಿಸಿದ್ಧನಗೌಡ ಮಾ. ಪಾಟೀಲ, ಹಿರಿಯ ಕವಿಯತ್ರಿ ನಾಗರತ್ನ ಬನ್ನಿ ಕೊಪ್ಪ, ಉಪಸ್ಥಿತರಿದ್ದರು,
ಸಾಹಿತ್ಯ ಸಮ್ಮೇಳನ ದ ಆಮಂತ್ರಣ ಪತ್ರಿಕೆ, ಅತಿಥಿಗಳಿಗೆ ಆಹ್ವಾನ, ಯಾವ ಯಾವ ಗೋಷ್ಠಿ ಗಳನ್ನು ಮಾಡಬೇಕು ಎಂಬ ಬಗ್ಗೆ ಎ.ಪಿ. ಅಂಗಡಿ ಯವರು, ಎಲ್ಲರೂ ಒಂದಗೂಡಿ, ಕಾರ್ಯನಿರ್ವಹಿಸಿದರೆ, ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು
ಹೇಳಿದರು, ಮೈಲಾರಪ್ಪಾ ಉಂಕಿ ಅವರೂ ಸಹ ನಮ್ಮ ತನು,ಮನ, ಧನ, ಅರ್ಪಿಸಿ, ಸಮ್ಮೇಳನದ ಯಶಸ್ಸಿಗೆ ಕಾರಣರಾಗೋಣ ಎಂದರು.
ಸಭೆಯಲ್ಲಿ ನಾಗರತ್ನ ಬನ್ನಿ ಕೊಪ್ಪ, ಅವರೂ ಸಮ್ಮೇಳನದ ಕಾರ್ಯವನ್ನು ನಮ್ಮ ಮನೆಯ ಕಾರ್ಯವೆಂದು ಮಾಡೋಣ, ಎಂದರು.
ಶ್ರೀಕಾಂತ್ ಸಿಂಗಾಪೂರ ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಕ್ಕೆ ನಮ್ಮ ಶ್ರಮ ಅಗತ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ, ಅವರು ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರವನ್ನು ಬಯಸುವೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕೊಪ್ಪಳದ ಜನಪ್ರಿಯ ಶಾಸಕರು, ಕೆ. ಎಂ. ಎಫ್, ಹಾಲು ಉತ್ಪಾದನಾ ಘಟಕದ ಅಧ್ಯಕ್ಷರೂ ಆದ ರಾಘವೇಂದ್ರ
ಹಿಟ್ನಾಳ್ ಅವರಿಗೆ ಸಮ್ಮೇಳನ ಕುರಿತು ಚರ್ಚೆ ನಡೆಸಿದ ಸಭೆಯ ಮಾಹಿತಿ ನೀಡಲಾಯಿತು.
ಡಾ. ಮಹಾಂತೇಶ ನೆಲಾಗಣಿ ಅವರ ವಂದನಾರ್ಪಣೆ ಯೊಂದಿಗೆ ಸಭೆ ಯಶಸ್ವಿಯಾಗಿ ಮುಕ್ತಾಯವಾಯಿತು.
- ಕರುನಾಡ ಕಂದ ಪತ್ರಿಕೆ



















