ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಪಂಚದಲ್ಲಿ ದೆವ್ವಗಳಿಲ್ಲ ಆದರೆ ಕಾಡುವ ಮನುಷ್ಯರಿದ್ದಾರೆ | ನಿಜಗುಣಾನಂದ ಸ್ವಾಮೀಜಿ:

“ಇವತ್ತಿನ ಸುದ್ದಿ ನಾಳೆಯ ರದ್ದಿ” ನನ್ನ ಬಗ್ಗೆ ಬರೆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ಗುರುಮಠಕಲ್, ಅ.26: ಪಟ್ಟಣದ ಹೊರವಲಯದ ಜ್ಞಾನವೃಕ್ಷ ಕ್ಯಾಂಪಸ್ ಆವರಣದಲ್ಲಿ ಇಂದು ಶ್ರೀರಾಮ ಎಜುಕೇಶನ್ ಟ್ರಸ್ಟ್ ನವೋದಯ ತರಬೇತಿ ಕೇಂದ್ರದ ವತಿಯಿಂದ ನವೋದಯ ಸೈನಿಕ ಶಾಲೆಗಳಿಗೆ ಆಯ್ಕೆಯಾದ ಮಕ್ಕಳ ಸನ್ಮಾನ ಹಾಗೂ ಪೋಷಕರ ಸಭೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬೈಲಹೊಂಗಲ ನಿಷ್ಕಲಮಠದ ನಿಜಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಸ್ವಾಮೀಜಿ ಪತ್ರಕರ್ತರನ್ನು ಉದ್ದೇಶಿಸಿ “ಕೆಲವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಬರೆಯುತ್ತಾರೆ, ಅವರು ಇವತ್ತಿನ ಸುದ್ದಿ ನಾಳೆ ರದ್ದಿ. ನಾನು ಅದಕ್ಕೆ ತಲೆಕೆಡಿಸಿಕೊಂಡಿರುವುದಿಲ್ಲ, “ಮಕ್ಕಳಿಗೆ ಶಿಕ್ಷಣವೇ ಪ್ರಮುಖ. ಅಂಧನಂಬಿಕೆ, ಪಂಚಾಂಗ, ಮೂಢನಂಬಿಕೆಯಲ್ಲಿ ವಿಶ್ವಾಸವಿಡಬಾರದು. ದುಡಿಮೆಯೇ ದೇವರು, ದುಡಿಮೆಯೇ ಪರಿಹಾರ. ಈ ಪ್ರಪಂಚದಲ್ಲಿ ದೆವ್ವಗಳಿಲ್ಲ, ಆದರೆ ಮೂಢನಂಬಿಕೆಯ ಹೆಸರಿನಲ್ಲಿ ಕಾಡುವ ಮನುಷ್ಯರಿದ್ದಾರೆ” ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಅಥಿತಿಗಳಾಗಿ ಆಗಮಿಸಿದ ಹುಲಿಕಲ್ ನಟರಾಜ ಮಾತನಾಡಿ, “ ಪೋಷಕರು ಮಕ್ಕಳಿಗೆ ಸಾಧನೆಯ ಪ್ರೇರಣೆಯಾಗಬೇಕು,” ಯಾದಗಿರಿಯಲ್ಲಿ ಇದೇ ತಿಂಗಳು 28,29,30 ರಂದು ಯಾದಗಿರಿ ನಗರದ ಕ್ರೀಡಾಂಗಣದಲ್ಲಿ ಜರುಗುವ ಜಾಗತಿಕ ವೈಜ್ಞಾನಿಕ ಸಮ್ಮೇಳನ ದಲ್ಲಿ ಪಾಲ್ಗೊಳ್ಳಲು ತಿಳಿಸಿದರು.

ಇನ್ನೋರ್ವ ಅಥಿತಿ ಹಣಮಂತ ಬಂಕಲಗಿ (ಯಾದಗಿರಿ ಪೊಲೀಸ್ ಠಾಣೆ ಅಧಿಕಾರಿ) ಮಾತನಾಡಿ, “ಮಕ್ಕಳು ಪೋಷಕರಿಂದ ಹಲವಾರು ಗುಣಗಳನ್ನು ಕಲಿಯುತ್ತಾರೆ. ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಥಾಮಸ್ ಆಲ್ವ ಎಡಿಸನ್, ತೇನ್ ಸಿಂಗ್ ಇವರಿಗೆ ತಾಯಿಯ ಮಾರ್ಗದರ್ಶನ ಪ್ರಮುಖ ಪಾತ್ರವಹಿಸಿತ್ತು. ಮಕ್ಕಳು ಸಂಸ್ಕಾರದಿಂದ ಬದುಕು ರೂಪಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಪಿ. ಪಾಟೀಲ, ವಾಸುದೇವ ಜಗವಾಣಿ (ಪತ್ರಕರ್ತ), ಸೂರ್ಯಕಾಂತ್ ಎನ್. ಘಂಟಿ, ವಿಶ್ವರಾದ್ಯ ಸತ್ಯಂಪೆಟ್, ದಿನೇಶ್ ಸ್ವಾಮಿ (ಪೊಲೀಸ್ ಇಲಾಖೆ), ರಮೇಶ್ ಅನಸುರ (ಸಂಸ್ಥೆಯ ಅಧ್ಯಕ್ಷ) ಉಪಸ್ಥಿತರಿದ್ದರು. ಕುಮಾರಿ ವೃಂದ ವೇದಿಕೆಯು ಅಲಂಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಪಾಲಕರು ಮತ್ತು ಶ್ರೀಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!