ಬನಹಟ್ಟಿ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ – ಬೆಂಗಳೂರು ಗ್ರಾ. ಜಿಲ್ಲೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕನಲ್ಲಿ ಆಯೋಜಿಸಿದ ‘ನಾನು ವಿಜ್ಞಾನಿ -2025’ ಟೆಲಿಸ್ಕೋಪ್ ತಯಾರಿಕೆ ತರಬೇತಿಯಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳು 9 ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಸ್ವತಃ ತಾವೇ ಟೆಲಿಸ್ಕೋಪ್ ತಯಾರಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿರುವುದು ಅಭಿನಂದನೀಯವಾಗಿದೆ, ಹಾಗೆಯೇ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹ್ಲುಟ್ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್ ಹೇಳಿದರು.
ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಗಜಾನನ ಹತ್ತಳ್ಳಿ ಅವರು ಮಾತನಾಡಿ ಮಾನವನ ಜೀವನದಲ್ಲಿ ವೈಜ್ಞಾನಿಕತೆಯ ಅವಶ್ಯಕತೆ ಮತ್ತು ಕುವೆಂಪು ಅವರ ವಿಶ್ವಮಾನವ ಸಂದೇಶದ ಸಾರ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತಾವು ಟೆಲಿಸ್ಕೋಪ್ ತಯಾರಿಕೆಯ ಅನುಭವವನ್ನು ವೈಜ್ಞಾನಿಕವಾಗಿ ವಿವರಿಸಿದರು. ನಗರದ ಜ್ಞಾನಭಾರತಿ ಪೂರ್ವ /ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಪರಿಷತ್ತಿನ ಸಭೆಯಲ್ಲಿ ಪದಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಚಿದಾನಂದ ಜವಳಗಿ, ವಿದ್ಯಾಶ್ರೀ ಬಿರಾದಾರ, ಸೌಮ್ಯ ಜನಗೌಡ ಅವರನ್ನು ಸನ್ಮಾನಿಸಿ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ 2025ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಚಿಮ್ಮಡ ಸರಕಾರಿ ಶಾಲೆಯ ಶಿಕ್ಷಕಿ ನಿರ್ಮಲಾ ಬೀಳಗಿ ಅವರನ್ನು, ಅತಿಥಿಗಳಾಗಿ ಆಗಮಿಸಿದ ಜಗದೀಶ್ ಮೇತ್ರಿ ಸಿಆರ್ ಪಿ ಬನಹಟ್ಟಿ ಪಶ್ಚಿಮ, ರಾಚಯ್ಯ ಹಿರೇಮಠ ಸಿಆರ್ ಪಿ ಸಾವಳಗಿ, ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಸಂಗಮೇಶ ಹಚ್ಚಡದ ಅವರನ್ನು ಕೂಡಾ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಕೆ ಹನಗಂಡಿ, ಮಹಾಲಿಂಗಪ್ಪ ತೇಲಿ, ಪಿ ಆರ್ ಒಡೆಯರ್, ಸಂತೋಷ ಬಡ್ಡಿ, ಪಿ ಬಿ ಆಲಗೂರು, ಎ ಎಸ್ ಖವಟಕೊಪ್ಪ, ಎಸ್ ಪಿ ಮಿರ್ಜೆ, ಎನ್ ಎಂ ಹುಣಶ್ಯಾಳ ಹಾಜರಿದ್ದರು. ಮುಖೇಶ್ ತೇಲಿ ಸ್ವಾಗತಿಸಿದರು, ಎ ಎಚ್ ಬಾಗೇನ್ನವರ ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















