ನಮ್ಮ ಕರುನಾಡು ಸ್ವರ್ಗ ಇಲ್ಲಿದೆ ನೋಡು
ಕಲೆ ಸಂಸ್ಕೃತಿಗಳ ಸಾಹಿತ್ಯ ನೃತ್ಯ ಗೂಡು
ಹಚ್ಚ ಹಸಿರಿನ ಸಹ್ಯಾದ್ರಿಯ ಮಲೆನಾಡು
ದುಮ್ಮಿಕ್ಕಿ ಹರಿವ ಜೋಗದ ಸಿರಿ ನೋಡು.
ವೀರ ವನಿತೆಯರ ಶೌರ್ಯದ ಈ ನಾಡು
ಕವಿ ಪುಂಗವರ ವರ್ಣನೆಯ ಪದ ಬೀಡು
ತ್ಯಾಗ ಬಲಿದಾನಗಳ ಪುಣ್ಯದ ನೆಲವಿದು
ಕೆಚ್ಚೆದೆಯ ಘರ್ಜಿಸಿದ ಶೌರಿಗಳ ತವರಿದು.
ತುಂಗ ಭದ್ರಾ ಕೃಷ್ಣ ಕಾವೇರಿಯರ ಜಲಧಾರೆ
ಸ್ವರ್ಗಕ್ಕೆ ಸಮಾನವು ಸುಂದರದ ವಸುಂಧರೆ
ಪ್ರಕೃತಿ ಮಡಿಲು ನೋಡಲೆಷ್ಟು ಮನೋಹರ
ಜುಳು ಜುಳು ನಾದ ಕೇಳಲು ಬಲು ಹಿತಕರ.
ಇಲ್ಲುಂಟು ಆಯುರ್ವೇದ ಔಷಧ ಮೂಲಿಕೆ
ದಾಸರ ಪದ, ಶರಣರ ವಚನಗಳ ಮಾಲಿಕೆ
ಆಗಲಿ ದೈವ ಸೃಷ್ಟಿಯ ಸಂಪನ್ಮೂಲ ಬಳಕೆ
ದೇಹಾರೋಗ್ಯ ಭಾಗ್ಯವು ವೃದ್ಧಿಸಲಿ ಜಗಕೆ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.



















