ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಭಾರತೀಯ ಕ್ರಾಂತಿಕಾರಿ ಸೇನಾ ಕೊಪ್ಪಳ ಜಿಲ್ಲಾಧ್ಯಕ್ಷರಾದ ದೊಡ್ಡ ಬರಮಣ್ಣ ಮಾತನಾಡಿ ಕನ್ನಡವೆಂಬುವುದು ನನಗೆ ಬದುಕು ಕಟ್ಟಿ ಕೊಟ್ಟ ಭಾಷೆ, ಹೆಸರು ಕೊಟ್ಟ ಭಾಷೆ. ಅದರ ಮೇಲೆ ನನಗೆ ಅಪಾರ ಭಕ್ತಿ ಇದೆ ಅಂತ ನೀವೆಲ್ಲರೂ ಅನ್ನುತ್ತೀರಿ ಕನ್ನಡ ಚಂದ ಅಂತ ನಾನು ಹೇಳುತ್ತೇನೆ ಕನ್ನಡ ಭಾಷೆ ಚೆಂದ ಕರುನಾಡು ಅಂದ ಅಂತ ಕದಂಬರು ಗಂಗರು ಚಾಲುಕ್ಯರು ರಾಷ್ಟ್ರಕೂಟರು ಮೈಸೂರು ಒಡೆಯರು ವಿಜಯನಗರದ ಅರಸರು ಕೆಳದಿಯ ನಾಯಕರು ಆಳಿದ ನಾಡಿದು ಅವರ ಶೌರ್ಯ ಪರಾಕ್ರಮಗಳು ಬಿಟ್ಟು ಹೋದ ಇತಿಹಾಸಗಳು ಕಲ್ಲಿನಲ್ಲಿ ಕೆತ್ತಿದ ಶಾಸನಗಳು ಕಟ್ಟಿಹೋದ ಕೋಟೆ ಕೊತ್ತಲಗಳು ಗುಡಿ ಗೋಪುರಗಳು ಇನ್ನೂ ನಮ್ಮ ಮುಂದೆ ಹಾಗೆಯೇ ಇವೆ. ಕರಾವಳಿ ತೀರ, ಮಲೆನಾಡು, ಬಯಲುಸೀಮೆ ಈ ನಾಡಲ್ಲಿ ನೆಲೆಸುವವನೇ ಸ್ವರ್ಗವಾಸಿ ಎಂದು ಅನಿಸುತ್ತದೆ ಅತಿ ಸಂಪದ್ಬರಿತ ನಾಡು ನಮ್ಮದು. ಅತಿ ಶ್ರೀಮಂತ ಭಾಷೆ ನಮ್ಮದು ಈ ಭಾಷೆಯ ಅಸ್ತಿತ್ವವನ್ನು ಯಾರಿಂದಲೂ ಅಳಿಸಲಾಗದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾತಪ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ವೆಂಕೋಬ್ ಕನಕಪ್ಪ ಸುನಗಾರ, ವೆಂಕಟೇಶ್ ತಳ್ವಾರ್, ಮಂಜುನಾಥ್ ಗಂಟೆ, ಮೈಬೂಬ್, ತಿಮ್ಮಪ್ಪ ಸಿಂಗ್ರಿ, ಲಿಂಗರಾಜ ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಹಾಜರಿದ್ದರು .
ವರದಿ ಹನುಮೇಶ ಭಾವಿಕಟ್ಟಿ



















