ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ : ಶಿವಪ್ರಸಾದ್ ಹಾದಿಮನಿ ಅಭಿಮತ

ಕೊಪ್ಪಳ ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಶ್ರೀಮತಿ ಶಾರದಮ್ಮ.ವಿ.ಕೊತಬಾಳ ಬಿ. ಬಿ. ಎ, ಬಿ. ಸಿ. ಎ, ಮತ್ತು ಬಿ. ಕಾಂ. ಕಾಲೇಜಿನಲ್ಲಿ, ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಅವರು, ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡ ನಾಡು ವಿವಿಧ ಪ್ರಾಂತ್ಯಗಳಾಗಿ ಹರಿದು
ಹಂಚಿ ಹೋಗಿತ್ತು, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ, ಹೖದರಾಬಾದ್ ಕರ್ನಾಟಕ, ಎಂದು ವಿಂಗಡಣೆಯಾಗಿದ್ದ ಸಮಯದಲ್ಲಿ, ಕನ್ನಡ ಭಾಷೆಯನ್ನಾಡುವ ಎಲ್ಲಾ ಜನರನ್ನು, ಪ್ರದೇಶಗಳನ್ನು
ಒಂದು ಗೂಡಿಸಲು ನಡೆದ ಈ ಚಳುವಳಿ, ಆಲೂರುವೆಂಕಟ ರಾಯರು, ಹುಯಿಲಗೋಳ ನಾರಾಯಣರಾಯರು, ರಮಾನಂದ ತೀರ್ಥರು, ಮುಂತಾದ ಮಹನೀಯರ ಹೋರಾಟದ ಪರಿಶ್ರಮ ದಿಂದ 1956,ನವೆಂಬರ್ ಒಂದರಂದು
ಯಶಸ್ವಿ ಯಾಗಿ ಕನ್ನಡ ರಾಜ್ಯೋತ್ಸವದ ದಿನವೆಂದು
ಆಚರಣೆ ವಿದ್ಯುಕ್ತವಾಗಿ ಆರಂಭವಾಯಿತು,
ನಾವು ಬೇರೆ ಭಾಷೆಗಳನ್ನೂ
ಕಲಿಯುವುದರ ಜೊತೆಗೆ ನಮ್ಮ
ಮಾತೃ ಭಾಷೆಗೆ ಪ್ರಧಾನ ಆದ್ಯತೆ
ನೀಡಬೇಕು, ಅಭಿಮಾನ ಎನ್ನುವುದು, ಯಾರಿಂದಲೂ ಹೇಳಿಸಿಕೊಂಡು ಬರುವುದಲ್ಲ,
ಕನ್ನಡ ಭಾಷೆಗೆ ಸಾವಿರ ವರ್ಷ ಗಳ ಪ್ರಾಚೀನತೆ ಇದೆ, ಜೊತೆಗೆ ಶ್ರೀಮಂತ ಭಾಷೆ, ಎಂಬುದಕ್ಕೆ
ಕನ್ನಡ ಸಾಹಿತ್ಯ ದ ಎಂಟು ದಿಗ್ಗಜರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದ್ದೇ ಸಾಕ್ಷಿಯಾಗಿದೆ, ಪ್ರತಿಯೊಬ್ಬರೂ, ಕನ್ನಡವನ್ನು ಉಳಿಸಿ, ಬೆಳೆಸಬೇಕೆಂಬ ಸಂಕಲ್ಪ ವನ್ನು ಮಾಡಬೇಕು, ಎಂದು ಮಾತನಾಡಿದರು.
ಆರಂಭದಲ್ಲಿ ಕನ್ನಡ ಮಾತೆ,
ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,
ನಾಡಗೀತೆಯನ್ನು, ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರಾಜ ರಾಜೇಶ್ವರ ರಾವ್, ಗ್ರಂಥ ಪಾಲಕ, ಬಸವಂತಪ್ಪ ಮತ್ತೂರ, ಪ್ರಾಧ್ಯಾಪಕರಾದ ಜಯಸಿಂಹ, ಪ್ರದೀಪ ಪಲ್ಲೇದ,
ಡಾ. ಹನುಮಂತಪ್ಪ, ವಿಜಯಲಕ್ಷ್ಮಿ ಮೇಡಂ, ಹಾಗೂ
ಬೋದಕೇತರ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಡಾ ಹನುಮಂತಪ್ಪ ಅವರು, ಸ್ವಾಗತಿಸಿ, ವಂದನಾರ್ಪಣೆಗೈದರು.

  • ‘ಕರುನಾಡ ಕಂದ.’
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!